ಮಂಗಳೂರು ವಿವಿ: ವಾಣಿಜ್ಯ ವಿಭಾಗದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

Upayuktha
0




ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ, ʼವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ಜಾಗತಿಕ ವಿದ್ಯಮಾನಗಳುʼ ಎಂಬ ವಿಷಯದ ಕುರಿತು,  ಬ್ಯಾಂಕ್‌ ಆಪ್‌ ಬರೋಡ, ಕೆನರಾ ಬ್ಯಾಂಕ್‌  ಮತ್ತು ಯೂನಿಯನ್‌ ಬ್ಯಾಂಕ್‌ ಸಹಯೋಗದೊಂದಿಗೆ, ಮೇ 29 ಮತ್ತು 30 ರಂದು, ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ವಿವಿಯ ಮಂಗಳಾ ಸಭಾಂಗಣದಲ್ಲಿ  ಆಯೋಜಿಸಿದೆ.


ವಾಣಿಜ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳು ಮತ್ತು ಪರಿವರ್ತನೆಗಳ ಮೇಲೆ ಬೆಳಕು ಚೆಲ್ಲುವುದು, ವಿಶ್ಲೇಷಿಸುವುದು  ಸಮ್ಮೇಳನದ ಉದ್ದೇಶವಾಗಿದೆ. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಕೌನ್ಸಿಲ್‌ನ ಉಪಾಧ್ಯಕ್ಷ ಪ್ರೊ. ಎಸ್‌. ಆರ್. ನಿರಂಜನ‌ ಸಮ್ಮೇಳನವನ್ನು ಗುರುವಾರ ಬೆಳಿಗ್ಗೆ 9.30 ಕ್ಕೆ ಉದ್ಘಾಟಿಸಲಿದ್ದು, ಜ್ಯೋತಿ ಲ್ಯಾಬ್ಸ್ ಲಿಮಿಟೆಡ್‌ ಹಾಗೂ ಎಫ್‌.ಐ.ಸಿ.ಸಿ.ಐ.ನ ಮಾಜಿ ಎಂ.ಡಿ. ಸಿ. ಎ. ಕೆ. ಉಲ್ಲಾಸ್‌ ಕಾಮತ್‌ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. 


ಕುಲಸಚಿವ ಕೆ. ರಾಜು ಮೊಗವೀರ, ಚಾರ್ಟೆಡ್ ಅಕೌಂಟೆಟ್‌ ಸಿಎ. ನಿತಿನ್‌ ಜೆ. ಶೆಟ್ಟಿ, ಇನ್ಫೋಸಿಸ್ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ, ಅಧ್ಯಕ್ಷ ವಾಸುದೇವ ಕಾಮತ್‌, ಜಿಂಬಾಬ್ವೆಯ ಸಾಂಸ್ಥಿಕ ಪ್ರಗತಿ ತಜ್ಞ ವಿನ್ನಿ ಸಿಬೊಂಗೆಲೆ ಬಾಜಿಲ್ಲಾ, ಬ್ಯಾಂಕ್‌ ಆಪ್‌ ಬರೋಡದ ಜನರಲ್ ಮೆನೇಜರ್ ರಾಜೇಶ್‌ ಖನ್ನಾ, ಕೆನರಾ ಬ್ಯಾಂಕ್‌ ಜನರಲ್‌ ಮೆನೇಜರ್‌ ಮಂಜುನಾಥ್‌ ಬಿ. ಸಿಂಘಾಯ್ ಮತ್ತು ಯೂನಿಯನ್‌ ಬ್ಯಾಂಕ್‌ ಜನರಲ್‌ ಮೆನೇಜರ್‌ ರಾಜೇಂದ್ರ ಕುಮಾರ್‌ ಭಾಗವಹಿಸಲಿದ್ದಾರೆ.


ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ, ʼವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ದಿ ಮತ್ತೆಯ ಜವಾಬ್ದಾರಿʼ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಸಂಜೆ 5.30 ರಿಂದ ಸಾಂಸ್ಕ್ರತಿಕ ಸ್ಪರ್ಧೆ ಮತ್ತು ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ʼಸ್ಕೂಲ್‌ ಲೀಡರ್‌ʼ ಎಂಬ ತುಳು ಸಿನಿಮಾ ತಂಡ ಭಾಗವಹಿಸಲಿದೆ. 


ಎರಡನೆಯ ದಿನ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೈಂಟ್‌ ಜೋಸೆಪ್ ಇಂಜಿನಿಯರಿಂಗ್‌ ಕಾಲೇಜಿನ ಡೀನ್‌ ಪ್ರೋ. ಪ್ರಕಾಶ್‌ ಪಿಂಟೋ ಹಾಗೂ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ನಿಕಾಯದ ಡೀನ್‌ ಪ್ರೋ. ಪುಟ್ಟಣ್ಣ ಕೆ. ಭಾಗಹಿಸಲಿದ್ದಾರೆ. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ವೈ. ಮುನಿರಾಜು, ಪ್ರೋ. ಈಶ್ವರ ಪಿ, ಪ್ರೋ. ವೇದವ ಪಿ, ಮತ್ತು ಪ್ರೋ, ಪರಮೇಶ್ವರ ಉಪಸ್ಥಿತರಿರುವರು. ಸಭಾಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಲಿದ್ದಾರೆ. 


ಮ್ಯಾಗ್ನಮ್‌ ಫೆಸ್ಟ್ 

ವಾಣಿಜ್ಯ ವಿಭಾಗ ಪ್ರತಿ ವರುಷ ಆಯೋಜಿಸುತ್ತಿರುವ ʼಮ್ಯಾಗ್ನಮ್‌ʼ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್,  ಮತ್ತು ʼಯುಗಾಂತರʼ ಕಲ್ಚರಲ್ ಫೆಸ್ಟ್ಗಳು ಗಮನ ಸೆಳೆಯಲಿವೆ. ಮ್ಯಾಗ್ನಮ್‌ ಪೆಸ್ಟ್‌ ನಲ್ಲಿ ಮುಖ್ಯವಾಗಿ ಪೈನಾನ್ಸ್‌, ಬ್ಯುಸಿನೆಸ್‌ ಕ್ವಿಜ್, ಇವೆಂಟ್‌ ಮ್ಯಾನೇಜ್ಮೆಂಟ್‌, ಮಾರ್ಕೆಟಿಂಗ್, ಪಬ್ಲಿಕ್‌ ರಿಲೇಷನ್‌ ಮತ್ತು ಬೆಸ್ಟ್‌ ಎಂಟ್ರಿಪ್ರಿನ್ಯುಯರ್‌ ಅಂತರ್‌ ಕಾಲೇಜು ಇವೆಂಟ್‌ಗಳು ನಡೆಯಲಿವೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.   

  

ಇಂಟಿಗ್ರೇಟಿವ್‌ ಕಾಮರ್ಸ್ ಐ 5 ಲ್ಯಾಬ್‌ ಉದ್ಘಾಟನೆ 

ವಿದ್ಯಾಥಿಗಳು ಮತ್ತು ಸಂಶೋಧಕರಿಗೆ ಕಲಿಕೆ, ಜ್ಞಾನರ್ಜನೆಗೆ ಅನುಕೂಲವಾಗುವಂತೆ ಪ್ರಚಲಿತ ವಿದ್ಯಮಾನ, ಹೊಸ ಮಾದರಿಗಳು, ಕೃತಕ ಬುದ್ದಿಮತ್ತೆ ಮೊದಲಾದ ಹೊಸ ಅನ್ವೇಷಣೆಗೆ ಕಾಮರ್ಸ್ ಐ 5 ಲ್ಯಾಬ್ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಆರಂಭಗೊಳ್ಳಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಎಲ್. ಧರ್ಮ ಉದ್ಘಾಟನೆ ನೆರವೇರಿಸಲಿದ್ದಾರೆ. 


ಎರಡು ದಿನಗಳ ಸಮ್ಮೇಳನದಲ್ಲಿ, ದೇಶ ವಿದೇಶಗಳಿಂದ ವಿವಿಧ ಕ್ಷೇತ್ರಗಳ ತಜ್ಞರು, ಸಂಶೋಧಕರು, ಶಿಕ್ಷಣ ಕ್ಷೇತ್ರದ ಪ್ರಮುಖರು, ಮತ್ತು ಕೈಗಾರಿಕಾ ವೃತ್ತಿಪರರು ಭಾಗವಹಿಸಲಿದ್ದಾರೆ.  ಎರಡು ದಿನ‌ ಸುದೀರ್ಘ ಶೈಕ್ಷಣಿಕ ಚರ್ಚೆ, ಚಿಂತನೆ, ಸಮಾಲೋಚನೆ, ಮೊದಲಾದ ಕಾರ್ಯಕ್ರಮಗಳು ಜರುಗಲಿವೆ, ಎಂದು ವಾಣಿಜ್ಯ ವಿಭಾಗದ ಮುಖ್ಯದ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ  ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top