ಬೆಂಗಳೂರು: 29ರಂದು ವಿದ್ವಾನ್ ಅಮೃತ್‌ಗೆ ಗುರುವಂದನೆ

Upayuktha
0

*  ಮೃದಂಗ - ಖಂಜಿರ ಪ್ರವೀಣರಿಗೆ ಶಿಷ್ಯರಿಂದ ಸನ್ಮಾನ.

*  ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ಕಾರ್ಯಕ್ರಮ.  



ಬೆಂಗಳೂರು: ಪ್ರಖ್ಯಾತ ಖಂಜಿರ ಮತ್ತು ಮೃದಂಗ ವಿದ್ವಾಂಸರಾದ ಎನ್. ಅಮೃತ್ ಅವರಿಗೆ ಮೇ 29ರ ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.


ಆಕಾಶವಾಣಿ ಎ ಟಾಪ್ ಕಲಾವಿದರಾಗಿ, ಸಂಗೀತ ಕ್ಷೇತ್ರದಲ್ಲಿ 44 ವರ್ಷ ಮತ್ತು ವೇದಿಕೆ ಮೇಲಿನ ಕಲಾಭಿವ್ಯಕ್ತಿಯಲ್ಲಿ 40 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿರಿಯ ಕಲಾವಿದ ಅಮೃತ್ ಅವರಿಗೆ ಶಿಷ್ಯರು ಮತ್ತು ಅಭಿಮಾನಿ ವೃಂದದವರು ಆತ್ಮೀಯವಾಗಿ ಗೌರವಿಸಲಿದ್ದಾರೆ. ಸಂಭ್ರಮಾಚರಣೆ ಸಂದರ್ಭಕ್ಕೆ ಹಿರಿಯ ವಿದ್ವಾಂಸರಾದ ಆರ್.ಕೆ. ಪದ್ಮನಾಭ, ಡಾ. ಮೈಸೂರು ಎಂ. ಮಂಜುನಾಥ್, ವಿಮರ್ಶಕ ಡಾ. ಎಂ. ಸೂರ್ಯಪ್ರಸಾದ್, ಕಲಾ ಪೋಷಕರಾದ ಡಾ. ಆರ್.ವಿ. ರಾಘವೇಂದ್ರ ಸಾಕ್ಷಿಯಾಗಲಿದ್ದಾರೆ. 


ಖ್ಯಾತ ಮೃದಂಗ ವಿದ್ವಾಂಸರಾದ ಎಂ. ವಾಸುದೇವರಾವ್ ಮತ್ತು ಎ. ವಿ. ಆನಂದ್ ಉಪಸ್ಥಿತಿಯಲ್ಲಿ ವಿದ್ವಾನ್ ಬಿ. ಎಸ್. ಪುರುಷೋತ್ತಮ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಲಾ ರಸಿಕರು ಮತ್ತು ಅಭಿಮಾನಿಗಳು ಆಗಮಿಸಬೇಕೆಂದು ಆಯೋಜಕರು ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top