ವಿಶೇಷ ಸುಗಂಧ ದ್ರವ್ಯ ತಯಾರಿಕೆ ತರಬೇತಿ

Upayuktha
0


ಮಂಗಳೂರು: ಅಮ್ಮನ ಜೊತೆಗಿನ ಬಾಂಧವ್ಯವನ್ನು ಸಂಭ್ರಮಿಸಲು ಈ ವರ್ಷದ ಅಮ್ಮಂದಿರ ದಿನದ ಸಂದರ್ಭದಲ್ಲಿ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಟೈಟಾನ್ ವರ್ಲ್ಡ್‌ ನಲ್ಲಿ ಪರ್‍‌ಫ್ಯೂಮ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ.


ಅಮ್ಮಂದಿರನ್ನು ಆ ದಿನ ಮಳಿಗೆಗೆ ಕರೆದುಕೊಂಡು ಬಂದು ಆಕೆಗೆ ಅವಿಸ್ಮರಣೀಯ ಉಡುಗೊರೆ ನೀಡಲು ಸಂಸ್ಥೆಯು ಆಹ್ವಾನ ನೀಡುತ್ತಿದೆ. ಮೇ 10 ಮತ್ತು 11ರಂದು ಮಂಗಳೂರು ಸೇರಿದಂತೆ ದೇಶದ 163ಕ್ಕೂ ಹೆಚ್ಚು ಟೈಟಾನ್ ವರ್ಲ್ಡ್‌ ಮಳಿಗೆಗಳಿಗೆ ಗ್ರಾಹಕರು ತಮ್ಮ ತಾಯಂದಿರೊಂದಿಗೆ ಆಗಮಿಸಿ ಅಲ್ಲಿ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಚಿರ ಬಾಂಧವ್ಯವನ್ನು ಸಂಭ್ರಮಿಸಲು ಸಂಸ್ಥೆಯು ವಿಶೇಷ ಶಿಬಿರ ಹಮ್ಮಿಕೊಂಡಿದೆ ಎಂದು ಟೈಟಾನ್ ವಾಚಸ್ ಮತ್ತು ವೇರೇಬಲ್ಸ್ ನ ಮುಖ್ಯ ಮಾರಾಟ ಅಧಿಕಾರಿ ಹಾಗೂ ಉಪಾಧ್ಯಕ್ಷ ರಾಹುಲ್ ಶುಕ್ಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಈ ಕಾರ್ಯಕ್ರಮಕ್ಕಾಗಿ ಟೈಟಾನ್ ವರ್ಲ್ಡ್‌ ಮಳಿಗೆಗಳಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗಿದ್ದು, ತಜ್ಞರ ಮಾರ್ಗದರ್ಶನದಲ್ಲಿ ಗ್ರಾಹಕರು ಅಲ್ಲಿನ ಸುಗಂಧ ದ್ರವ್ಯಗಳ ವಿವಿಧ ಗುಣ ಲಕ್ಷಣಗಳನ್ನು ಅರಿತು, ತಮ್ಮದೇ ಆದ ವಿಶಿಷ್ಟ ಸಂಯೋಜನೆಯ ಪಫ್ರ್ಯೂಮ್ ಅನ್ನು ರಚಿಸಬಹುದು. ಹಾಗೆ ತಾವೇ ತಯಾರಿಸಿದ ಪಫ್ರ್ಯೂಮ್ ಅನ್ನು ಉನ್ನತ ಗುಣಮಟ್ಟದ ಬಾಟಲಿಯಲ್ಲಿ ಹಾಕಿ ಕೊಂಡೊಯ್ಯಬಹುದು. ಇದು ಅಮ್ಮಂದಿರ ದಿನಕ್ಕೆ ಅತ್ಯುತ್ತಮವಾದ ಮತ್ತು ಶಾಶ್ವತವಾಗಿ ನೆನಪಲ್ಲಿ ಉಳಿಯುವ ಶಾಶ್ವತ ಸ್ಮರಣಿಕೆಯಾಗಲಿದೆ.


ಈ ಕಾರ್ಯಕ್ರಮದಲ್ಲಿ ಗ್ರಾಹಕರು ಆಯ್ದ ಸುಗಂಧ ತೈಲಗಳನ್ನು ಬಳಸಿ 50 ಎಂಎಲ್ ನಷ್ಟು ವಿಶೇಷ ಸುಗಂಧ ದ್ರವ್ಯ ತಯಾರಿಸಬಹುದು. ಅಮ್ಮ ಮತ್ತು ಮಕ್ಕಳು ಜೊತೆಯಾಗಿ ಕಳೆಯಬಹುದಾದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಪ್ರಕಟಣೆ ತಿಳಿಸಿದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top