ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂಪನ್ನ

Upayuktha
0


ಕಾಸರಗೋಡು: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ನಡೆದುಕೊಂಡು ಬರುವ ಪ್ರತಿಷ್ಠಾ ದಿನ ಉತ್ಸವವು ಇಂದು (ಮೇ 28) ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿತು.


ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ಕೃತಾರ್ಥರಾದರು ಎಂದು ದೇವಸ್ಥಾನದ ಮೇಲ್ವಿಚಾರಕರಾದ ಸೀತಾರಾಮ ಬಳ್ಳುಳ್ಳಾಯ ತಿಳಿಸಿದರು.

 

ಬೆಳಗ್ಗೆ 7 ಗಂಟೆಗೆ ಗಣಹೋಮ, ಬೆಳಗ್ಗೆ  9ಕ್ಕೆ  25 ಕಲಶಗಳ ಅಭಿಷೇಕ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ಭೋಜನ ನೆರವೇರಿತು. ರಾತ್ರಿ 07.30ಕ್ಕೆ ಶ್ರೀರಂಗಪೂಜೆ ನಡೆಯಲಿದೆ.


إرسال تعليق

0 تعليقات
إرسال تعليق (0)
To Top