ಬೆಂಗಳೂರು: ಬಿ.ಎಂ.ಎಸ್.ಮಹಿಳಾ ಮಹಾವಿದ್ಯಾಲಯ ವತಿಯಿಂದ 'ಕಲಾಪರ್ವ 2K25ʼ ಶೀರ್ಷಿಕೆಯಲ್ಲಿ ಅಂತರಕಾಲೇಜು ಸಾಂಸ್ಕೃತಿಕ ಉತ್ಸವವನ್ನು ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾ ಒಳಾಂಗಣದಲ್ಲಿ ಬುಧವಾರ (ಮೇ 21) ಬೆಳಗ್ಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಧಾನ ಪೋಷಕರೂ, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ದತ್ತಿ ದಾನಿಗಳೂ, ಸದಸ್ಯ ಕಾರ್ಯದರ್ಶಿಗಳೂ, ಅಧ್ಯಕ್ಷರೂ ಆದ ಡಾ.ಬಿ.ಎಸ್. ರಾಗಿಣಿ ನಾರಾಯಣ್ ರವರು ಶುಭಕೋರಿದರು.
ಆಡಳಿತ ಮಂಡಳಿಯ ಧರ್ಮದರ್ಶಿಗಳಾದ ಅವಿರಾಮ್ ಶರ್ಮರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಘು ಕುಮಾರ ಎನ್ ರವರು ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು.
ಬಿ.ಎಂ.ಎಸ್.ಇ.ಟಿ. ನಿರ್ದೇಶಕರಾದ ವಿಂಗ್ ಕಮಾಂಡರ್ ರಾಘವನ್ ಆರ್.ಎ, ಬಿ.ಎಂ.ಎಸ್.ಇ.ಟಿ. ಉಪನಿರ್ದೇಶಕ ಪ್ರಸಾದ್ ವಿ, ಹಣಕಾಸು ಅಧಿಕಾರಿ ಸಂಜೀವ ಬಿ.ಎಸ್. ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ನಿರ್ದೇಶಕ ಲೆಫ್ಟಿನೆಂಟ್ ಡಾ.ಗೀತಶ್ರೀ ಎಂ, ಪ್ರಾಂಶುಪಾಲ ಡಾ. ರಘು ಕುಮಾರ ಎನ್, ಬಿ.ಎಂ.ಎಸ್.ಸಿ.ಸಿ.ಎಂ. ಕಾಲೇಜಿನ ಪ್ರಾಂಶುಪಾಲ ಪಂಕಜ್ ಚೌದರಿ, ಬಿ.ಎಂ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಹೆಚ್.ಸುರೇಶ ಮತ್ನು ಉಪಪ್ರಾಂಶುಪಾಲರಾದ ಶ್ರೀಮತಿ ಸುನಿತ ಕೆ, ಬಿ.ಎಂ.ಎಸ್. ಮಹಿಳಾ ಕಾಲೇಜಿನ ಶೈಕ್ಷಣಿಕ ಡೀನ್ - ಡಾ. ಭುವನೇಶ್ವರಿ ಇ, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಶುಭ ಎಂ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ವಿಧ್ಯುಕ್ತವಾಗಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸಿದ್ಧ ನೃತ್ಯಗಾರರೂ ಮತ್ತು ನೃತ್ಯ ಸಂಯೋಜಕರಾದ ಕಿಶನ್ ಬಿಲಗಲಿ ಅವರು ‘ನೃತ್ಯವನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಇಂದಿನ ವಿದ್ಯಾರ್ಧಿಗಳು ಮುಂದಿನ ಭವ್ಯ ಭವಿಷ್ಯದ ರೂವಾರಿಗಳು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು’ ಶುಭ ಕೋರಿದರು.
2024-2025ರ ಸಾಲಿನ ಶೈಕ್ಷಣಿಕ ವರದಿಯನ್ನು ವೀಡಿಯೋ ಮೂಲಕ ಪ್ರದರ್ಶಿಸಲಾಯಿತು. ಮತ್ತು ವಿದ್ಯಾರ್ಥಿ ಸಾಧಕರಿಗೆ ದತ್ತಿ ನಗದು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧಿಕಾರಿಯಾದ ಶ್ರೀಮತಿ ಅಶ್ವಿನಿ ಸಿ ರವರು ವಂದನಾರ್ಪಣೆ ಸಲ್ಲಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಿಗಳು ವೈವಿದ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಜೆ 05:00 ಗಂಟೆಗೆ ಟ್ವಿನ್ ಬ್ರದರ್ಸ್ ತಂಡದವರಿಂದ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ