ಹುನಗುಂದ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Upayuktha
0


ಹುನಗುಂದ: ಹುನಗುಂದ ತಾಲೂಕಿನ ಚಿತ್ತವಾಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 2025-26 ನೇ ಸಾಲಿನ "ಶಾಲಾ ಪ್ರಾರಂಭೋತ್ಸವ" ಕಾರ್ಯಕ್ರಮವನ್ನು ಅದ್ದೂರಿಯಾಗಿ ಕೈಗೊಳ್ಳಲಾಯಿತು.


SDMC ಅಧ್ಯಕ್ಷರು, ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಶಾಲಾ ವಿದ್ಯಾರ್ಥಿಗಳನ್ನು ಪುಷ್ಪ ನೀಡುವ ಮೂಲಕ ತುಂಬು ಹೃದಯದಿಂದ ಸ್ವಾಗತಿಸಿದರು.


ಶಾಲೆಯ ತರಗತಿ ಕೋಣೆಗಳು ತಳಿರು ತೋರಣಗಳಿಂದ ಅಲಂಕೃತಗೊಂಡು ಸೂಕ್ತ ಕಲಿಕೋಪಕರಣಗಳೊಂದಿಗೆ ಸಿದ್ದಗೊಂಡು ವಿದ್ಯಾರ್ಥಿಗಳನ್ನು ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದವು.


ಸರಸ್ವತಿ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಗದ್ದನಗೌಡ ಗೌಡರ ರವರು ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೇ ಪ್ರತಿನಿತ್ಯ ಶಾಲೆಗೆ ಬರುವಂತೆ ತಿಳಿಸಿದರು ಹಾಗೂ ಶಿಕ್ಷಕರು ನೀಡಿದ ಅಂದಂದಿನ ಗೃಹ ಕಾರ್ಯಗಳನ್ನು ಅಂದೇ ಮಾಡಿ ಮುಗಿಸಿ ಹೊಸ ಹೊಸ ಜ್ಞಾನ ಪಡೆದುಕೊಳ್ಳುವಂತೆ ತಿಳಿಸಿದರು.


ಮುಖ್ಯ ಗುರುಮಾತೆಯರಾದ ಶ್ರೀಮತಿ S.I. ಹೈದ್ರಾಬಾದ್ ರವರು ಮಾತನಾಡುತ್ತ ನಮ್ಮ ಸರ್ಕಾರಿ ಶಾಲೆಯಲ್ಲಿ ಅನುಭವಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ,  ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್, ವಿದ್ಯಾರ್ಥಿ ವೇತನದ ಜೊತೆಗೆ ಹಾಲು, ಮೊಟ್ಟೆ, ಬಾಳೆ, ರುಚಿಯಾದ ಬಿಸಿಯೂಟ ಉಚಿತವಾಗಿ ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ವಿನಂತಿಸಿದರು.


ಪ್ರಸಕ್ತ ವರ್ಷ 5 ವರ್ಷ 5 ತಿಂಗಳು ಪೂರೈಸಿದವರನ್ನು 1ನೇ ತರಗತಿಗೆ ದಾಖಲಿಸಬಹುದೆಂದು ತಿಳಿಸಿದರು. 


ಶಾಲೆಯ ಹಿರಿಯ ಶಿಕ್ಷಕ ಬಿ. ಜಿ. ಗೌಡರರವರು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು, ಪಾಲಕರು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top