ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ CBSE (ಗ್ರೇಡ್ 12) 2024–25 ರ ಫಲಿತಾಂಶ

Upayuktha
0


ಬೆಂಗಳೂರು: CBSE (ಗ್ರೇಡ್ 12) 2024–25 ರ ಫಲಿತಾಂಶದಲ್ಲಿ ನಮ್ಮ ಶಾಲೆಯ ಪ್ರತಿಭಾಶಾಲಿ ವಿದ್ಯಾರ್ಥಿಗಳು ತೋರಿದ ಅದ್ಭುತ ಸಾಧನೆಯೊಂದಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರವು ಉತ್ತಮ ಸಾಧನೆಯ ಮೂಲಕ ಮತ್ತೊಂದು ಯಶೋಗಾಥೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯು ವಿದ್ಯಾರ್ಥಿಗಳ ದೃಢಚಿತ್ತ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಪ್ರತಿಫಲವಾಗಿದೆ.  ಸವಾಲುಗಳಿಂದ ಕೂಡಿದ ಈ ಕಾಲಘಟ್ಟದ ಮಧ್ಯೆಯೂ, ನಮ್ಮ ವಿದ್ಯಾರ್ಥಿಗಳು ತೋರಿದ ಮಾನಸಿಕ ಧೈರ್ಯ ಮತ್ತು ಬದ್ಧತೆ ಇಂದು ಪ್ರತಿಫಲ ನೀಡಿದೆ. ಈ ಯಶಸ್ಸು ತಮ್ಮ ದಿಟ್ಟ ನಿಲುವು ಮತ್ತು ಅಚಲ ಸಂಕಲ್ಪದಿಂದ ಸಾಧ್ಯವಾಯಿತು. ಯಶಸ್ಸಿನ ಮತ್ತೊಂದು ಮೈಲಿಗಲ್ಲಾಗಿ , ಶಾಲೆಯು ತಮ್ಮ ಸಾಧನೆಗಳ ಬಗ್ಗೆ ಅತ್ಯಂತ ಹೆಮ್ಮೆಪಡುವುದರ ಜೊತೆಗೆ, ಅವರ ಭವಿಷ್ಯದ ಎಲ್ಲ ಪ್ರಯತ್ನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತದೆ.

 

ಒಟ್ಟು 371 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶಾಲೆಯ ಸರಾಸರಿ ಶೇಕಡಾವಾರು ಫಲಿತಾಂಶ 85.06 ಆಗಿದೆ. 328  ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಮಾನವಿಕ ಶಾಖೆ (Humanities) ಸರಾಸರಿ: 87.5

ವಾಣಿಜ್ಯ ಶಾಖೆ (Commerce )ಸರಾಸರಿ: 85.57

ವಿಜ್ಞಾನ ಶಾಖೆ (Science ) ಸರಾಸರಿ: 84.00 


ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು

ಮಾನವಿಕ ಶಾಖೆ (Humanities) 

ಕೋಪಲ್ ಮುಖರ್ಜಿ - 98.4%


ವಾಣಿಜ್ಯ ಶಾಖೆ (Commerce )

ಅಭಿನವ್ ಗೋಯಲ್ - 98.4%


ವಿಜ್ಞಾನ ಶಾಖೆ (Science ) 

ಇಮಾದ್ ಅಹಮದ್ – 97.8%



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top