ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್ ಮತ್ತು ರೋ. ಡಾ. ರಾಘವೇಂದ್ರ ಪಿದಮಲೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೋ. ಸಂದೇಶ್ ಕುಮಾರ್ ರಾವ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತವಾದ ಆಸ್ಪತ್ರೆಯ ಸವಲತ್ತುಗಳ ಅಗತ್ಯವಿರುತ್ತದೆ. ರೋಟರಿಯಂತಹ ಸಂಘ ಸಂಸ್ಥೆಗಳು ಹಲವರ ಸಹಕಾರದಿಂದ ಆರೋಗ್ಯದ ಸವಲತ್ತುಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸಿದಾಗ ಅತ್ಯಂತ ಉಪಯುಕ್ತವಾಗುತ್ತದೆ. ಜನರ ಆರೋಗ್ಯ ಜಾಗೃತಿಯ ದೃಷ್ಟಿಕೋನದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು
ಸಾಮಾನ್ಯವಾಗಿ ಆಸ್ಪತ್ರೆ ಮತ್ತು ಡಾಕ್ಟರ್ ಗಳ ಬಳಿಗೆ ಅನಾರೋಗ್ಯಗೊಂಡವರು ತೆರಳುತ್ತಾರೆ. ಆದರೆ ಶಿಬಿರದಂತ ಕಾರ್ಯಕ್ರಮಗಳಲ್ಲಿ ವೈದ್ಯರೇ ಗ್ರಾಮೀಣ ಪ್ರದೇಶದ ಜನರ ಬಳಿಗೆ ಬಂದಿರುವುದು ನಿಜಕ್ಕೂ ಫಲಕಾರಿ. ಇದನ್ನು ಚಿಕಿತ್ಸೆಯ ಅವಶ್ಯಕ ಇರುವ ವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೋ. ಡಾ. ರಾಘವೇಂದ್ರ ಪಿದಮಲೆ ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ಕೆವಿಜಿ ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್ ನ ವೈದ್ಯರು ಸೇರಿದಂತೆ ನುರಿತ ತಜ್ಞರಿಂದ ಉಚಿತ ತಪಾಸಣೆ ಹಾಗೂ ಅಗತ್ಯವಿದ್ದವರಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಜನರು ದಂತ ಭರ್ತಿ, ದಂತ ಶುಚಿಗೊಳಿಸುವಿಕೆ, ಹಲ್ಲು ಹೊರತೆಗೆಯುವಿಕೆ, ಕೃತಕ ಹಲ್ಲುಗಳ ಜೋಡಣೆಯಂತಹ ವಿವಿಧ ದಂತ ಚಿಕಿತ್ಸೆಗಳನ್ನು ಪಡೆದರು.
ಆನ್. ಡಾ. ದೀಪಾಲಿ ಡೊಂಗ್ರೆ, ರೋ. ಉದಯ ಶಂಕರ್ ಸೇರಿದಂತೆ ಗ್ರಾಮಸ್ಥರು, ಜೆಸಿಐ ಕೊಕ್ಕಡ ಕಪಿಲಾ ಸದಸ್ಯರು ಹಾಗು ಶಾಲೆಯ ಆಡಳಿತ ಮಂಡಳಿ ಭಾಗಿಯಾಗಿದ್ದರು. ಶಿಬಿರವನ್ನು ಜೆಸಿಐ ಕೊಕ್ಕಡ ಕಪಿಲಾ ಅಧ್ಯಕ್ಷೆ ಶೋಭಾ ಪಿ ನಿರೂಪಿಸಿ, ವಂದಿಸಿದರು.
ಜನರ ಸೇವೆ ಮಾಡುವಂತಹ ಅವಕಾಶವನ್ನು ಮತ್ತು ಜವಾಬ್ದಾರಿಯನ್ನು ಬೆಳ್ತಂಗಡಿ ರೋಟರಿ ಸಂಸ್ಥೆ ನಮಗೆ ನೀಡಿದೆ. ಗ್ರಾಮೀಣ ಜನರ ಆರೋಗ್ಯ ಜಾಗೃತಿಯ ಉದ್ದೇಶದಿಂದ ಹಲವರ ಸಹಕಾರದೊಂದಿಗೆ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು, ಇದರಿಂದ ಎಲ್ಲ ವರ್ಗದ ಜನರು ಉಪಯೋಗ ಪಡೆದುಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

