ಅಭಯ ಲಕ್ಷ್ಮೀ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಮಕ್ಕಳ ನೃತ್ಯಾರ್ಪಣ

Chandrashekhara Kulamarva
0



ಬೆಂಗಳೂರು : ತ್ಯಾಗರಾಜನಗರದ 3ನೇ ಬ್ಲಾಕ್ ನಲ್ಲಿರುವ ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ 'ಶ್ರೀವಜ್ರಕ್ಷೇತ್ರ'ದಲ್ಲಿ ಮೇ 4, ಭಾನುವಾರದಂದು ಲಕ್ಷ್ಮೀ ನರಸಿಂಹಸ್ವಾಮಿ ಜಯಂತಿ ಸಪ್ತಾಹದ ಪ್ರಯುಕ್ತ ಬೆಳಗ್ಗೆ ನರಸಿಂಹಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. 


ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಪ್ರಣವಾಂಜಲಿ ಪಫಾ೯ಮಿಂಗ್ ಆಫ್ ಆರ್ಟ್ಸ್ ನ ವಿದ್ಯಾರ್ಥಿನಿಯರಾದ ಕು|| ಕೃತಿ, ಕು|| ಭಾವನಾ ಮತ್ತು ಕು|| ತ್ರಿಶಾಲಿ ಇವರಿಂದ ಸಾಮೂಹಿಕ ನೃತ್ಯ ಪ್ರದರ್ಶನ ನಡೆಯಿತು. ನಂತರ ಎಂಟು ವರ್ಷದ ಪುಟ್ಟ ಪ್ರತಿಭೆ ಕು|| ಆದ್ಯ ಮಯ್ಯ ಮಾಡಿದ ನರ್ತನ ಮುಖ್ಯ ಆಕರ್ಷಣೆಯಾಗಿತ್ತು.


ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಣವಾಂಜಲಿ ಟ್ರಸ್ಟ್ ನ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ಪವಿತ್ರಾ ಪ್ರಶಾಂತ್ ವಹಿಸಿದ್ದರು. ದೇವಸ್ಥಾನದ ಸಹಾಯಕ ಅರ್ಚಕರಾದ ನರಹರಿ ಆಚಾರ್ಯ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಸಾದ ನೀಡಿ ಆಶೀರ್ವಾದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top