ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Upayuktha
1 minute read
0

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಾಮಥ್ರ್ಯ ಉಪಯೋಜನೆಯ ಪಾಲನಾ   ಉಪಯೋಜನೆಯಡಿ ಅಂಗನವಾಡಿ  ಸಹಾಯಕಿ-4 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮಂಗಳೂರು ಗ್ರಾಮಾಂತರದ ನಾಗರಕಟ್ಟೆ ಮತ್ತು ಬಬ್ಬುಕಟ್ಟೆ, ಮತ್ತು ವಿಟ್ಲ ಮಹಿಳಾ ಮಂಡಲ ಮತ್ತು ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಅಂಗನವಾಡಿ ಅಥವಾ ಪಕ್ಕದ ಅಂಗನವಾಡಿ ಸರ್ವೆ ವ್ಯಾಪ್ತಿಯ  18 ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿ ಗಳು ಅಂಗನವಾಡಿ ಕಂ  ಸಹಾಯಕಿ-4 ಹುದ್ದೆಗೆ ಅರ್ಜಿ ಸಲ್ಲಿಸಬಹುದು.

 ಸಹಾಯಕಿಯರ ಹುದ್ದೆಗೆ ರೂ.3000  ಗೌರವಧನ  ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು  ಮೇ 31 ಕೊನೆಯ ದಿನ. ಅಂಗನವಾಡಿ   ಸಹಾಯಕಿ ಹುದ್ದೆಗೆ  ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10 ನೇ ತರಗತಿ ಪರೀಕ್ಷೆ/ 7ನೇ ತರಗತಿಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ  ಆಯಾ ವ್ಯಾಪ್ತಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು ಗ್ರಾಮಾಂತರ:9620636888, ಪುತ್ತೂರು:08251-298788, ವಿಟ್ಲ:08255-238080, ಇವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

إرسال تعليق

0 تعليقات
إرسال تعليق (0)
To Top