ಸಾಮಾಜಿಕ ಜಾಲತಾಣದ ಸದ್ಬಳಕೆಗೊಂದು ನಿದರ್ಶನ- ಶಾರದಾ ಕಲಾ ವೇದಿಕೆ

Upayuktha
0


ನಾವೀಗ ಇರುವುದು ತುಂಬಾ ಮಾಡರ್ನ್ ಯುಗದಲ್ಲಿ. ಬೆರಳ ತುದಿಯಲ್ಲಿ ಜಗವನ್ನೇ ನೋಡಬಹುದಾದ ಆವಿಷ್ಕಾರಗಳ ಯುಗದಲ್ಲಿ. ಹಿಂದಿನಂತೆ ಇಂದಿನ ಕಾಲದಲ್ಲಿ ಗೃಹಿಣಿಯರು ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯಬೇಕಾಗಿಲ್ಲ. ಅವರಿಗೆ ಇದ್ದ ಸಮಯದಲ್ಲಿ ಅವರಿಗೆ  ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಹೇರಳವಾಗಿದೆ.


ಈಗೀಗ ಫೇಸ್ಬುಕನಲ್ಲಿ ಅನೇಕ ಹೊಸ ಹೊಸ ವಿಧಾನಗಳನ್ನು ಗ್ರೂಪ್‌ಗಳ ಮುಖಾಂತರ ಪರಿಚಯ ಮಾಡಿಕೊಡಲಾಗುತ್ತಿದೆ. ಅನೇಕ ಗ್ರೂಪ್‌ಗಳಲ್ಲಿ ಸಾಹಿತ್ಯ ರಚನೆಗೆ ಒತ್ತು ನೀಡುತ್ತಿದ್ದಾರೆ. ಕೆಲವು ಗ್ರೂಪ್‌ನಲ್ಲಿ ದಾಸ ಸಾಹಿತ್ಯದ ಅನಾವರಣವಾಗುತ್ತಿದೆ. ಯಾರ ಗಮನಕ್ಕೂ ಬಾರದ ಪ್ರಸಿದ್ಧ ದಾಸರುಗಳ ಹಾಡನ್ನು ಹಾಡಿ ಅವುಗಳನ್ನು ಪ್ರಚುರಪಡಿಸುವುದು. ಇನ್ನೂ ಕೆಲವು ಗ್ರೂಪ್ ಗಳಲ್ಲಿ ಹೊಸ ಕವಿಗಳ, ಕವಿಯಿತ್ರಿಯರ, ಪರಿಚಯ, ಅವರು ಬರೆದ ಹಾಡುಗಳನ್ನು ಹಾಡುವುದಕ್ಕೆ ಒತ್ತು ನೀಡುತ್ತಿದ್ದಾರೆ.


ಶಾರದಾ ಕಲಾ ವೇದಿಕೆ ಎಂಬ ವಿಶಿಷ್ಟ ಫೇಸ್‌ಬುಕ್ ಗ್ರೂಪ್ ಎಲ್ಲ ರೀತಿಯ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಪ್ರಶಸ್ತಿ ಪುರಸ್ಕಾರ ಕೊಟ್ಟು ಅಭಿನಂದಿಸಿ ಬಹಳ ಚೆನ್ನಾಗಿ ಗ್ರೂಪ್ ನಿರ್ವಹಣೆ ಮಾಡುತ್ತಿದ್ದಾರೆ.


ಇಲ್ಲಿ ಶಾರದಾ ಕಲಾ ವೇದಿಕೆ ಸಂಸ್ಥಾಪಕರಾದ ಸತ್ಯ ಮಲ್ನಾಡ್ ಅವರು ಹೇಳುವಂತೆ- ಹವ್ಯಾಸಿ ಕಲಾವಿದರನ್ನು ಬೆಳೆಸುವ ಉದ್ದೇಶ ಈ ವೇದಿಕೆಯದ್ದಾಗಿದೆ. ಸತ್ಯ ಅವರು ಮಲೆನಾಡಿನಲ್ಲೇ ಬೆಳೆದವರಾದ್ದರಿಂದ ಯಕ್ಷಗಾನ, ಕರಕುಶಲ ಕಲೆಗಳು, ನಾಟ್ಯ ನಾಟಕ, ಹಾಡುಗಾರಿಕೆ ಮುಂತಾದವುಗಳಲ್ಲಿ ಅವರಿಗೆ ಆಸಕ್ತಿ ಉಂಟು. ಇದನ್ನು ಇನ್ನೂ ಎಲ್ಲೆಡೆ ಬೆಳೆಸುವ ಉದ್ದೇಶದಿಂದ ಎಲ್ಲ ಕಲೆಗಳುಲ್ಲ ಒಂದು ವೇದಿಕೆ ಸಿದ್ಧ ಮಾಡಿದರು. ಆದೇ ಶಾರದಾ ಕಲಾ ವೇದಿಕೆ ಆಯಿತು.


ಅವರೊಡನೆ ಇನ್ನೂ ಕೆಲವು ಸಹಾಯಕ ನಿರ್ವಾಹಕರು ಇದ್ದಾರೆ. ಎರಡು ವರ್ಷಗಳಲ್ಲಿ ಶಾರದಾ ಕಲಾ ವೇದಿಕೆಯ ಸದಸ್ಯರ ಸಂಖ್ಯೆ ಸುಮಾರು 10,000 ದಾಟಿದೆ. ದಿನವೂ ಸುಮಾರು 300-400 ಜನರು ತಮ್ಮ ಕಲೆಗಳನ್ನು ಇಲ್ಲಿ ಅನಾವರಣಗೊಳಿಸುತ್ತಿದ್ದಾರೆ. ದಿನವೂ 300,400 ಜನರು ಆಕ್ಟಿವ್ ಆಗಿ ತಮ್ಮ ಪೋಸ್ಟ್ ಅಪ್ಲೋಡ್ ಮಾಡುತ್ತಾರೆ.


ಶಾರದಾ ಕಲಾ ಸಮೂಹದಲ್ಲಿ ನಡೆಯುವ ಚಟುವಟಿಕೆಗಳು ತೀರಾ ವಿಭಿನ್ನ ಮತ್ತು ಆಕರ್ಷಕವಾಗಿವೆ. ದಾಸ ಸಾಹಿತ್ಯದ ಹಾಡುಗಾರಿಕೆ,ವಾದ್ಯ ನುಡಿಸುವುದು, ಸಿನಿಮಾ ಗೀತೆಗಳು, ಭಾವಗೀತೆ, ಕಗ್ಗಗಳು ಜಾನಪದ ಗೀತೆಗಳನ್ನು ಹಾಡುವುದು, ರಂಗೋಲಿ, ನೃತ್ಯ ಕಲೆ, ಚಿತ್ರಕಲೆ, ಕರಕುಶಲ ಕಲೆ, ಹೀಗೇ ಹತ್ತು ಹಲವು ಕಲೆಗಳು ಇಲ್ಲಿ ಅನಾವರಣಗೊಳ್ಳುತ್ತವೆ.


 ಸ್ವಾತಂತ್ರೋತ್ಸವದಲ್ಲಿ, ನವರಾತ್ರಿ ಹಬ್ಬದಲ್ಲಿ ವಿಶೇಷ ಥೀಮ್ ಕೊಟ್ಟು ಹಾಡಿಸುವುದು ವಿಭಿನ್ನ ತಮ್ಮ ಅಭಿನಯದ ಮೂಲಕ ಕಲೆಯನ್ನು ಪ್ರದರ್ಶಿಸುವುದು, ಹೀಗೇ ಎಲ್ಲ ರೀತಿಯ ವಿಭಿನ್ನ ಪ್ರಕಾರದ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಸದಸ್ಯರ ಪ್ರೀತಿ ಪಾತ್ರದ ಗ್ರೂಪ್ ಆಗಿ ಹೊರಹೊಮ್ಮಿದೆ.


ಶಾರದಾ ಕಲಾ ವೇದಿಕೆ ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸ್ವಲ್ಪ ಸಮಯದಲ್ಲಿಯೇ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಜನಪ್ರಿಯತೆ ಉತ್ತುಂಗಕ್ಕರಿದೆ. ಈ ಸುಸಂದರ್ಭದಲ್ಲಿ ಶಾರದಾ ಕಲಾ ಬಳಗದ ನಿರ್ವಾಹಕರಿಗೆ, ಸದಸ್ಯರಿಗೆ ಅಭಿನಂದನೆಗಳು. ಹೀಗೇ ಯಶಸ್ಸು ಸದಾ ನಿಮ್ಮದಾಗಲಿ.


ಈ ಸೋಶಿಯಲ್ ಮೀಡಿಯಾಗಳು ಕೆಟ್ದದ್ದನ್ನು ಕಲಿಯಲು ಹೇಳಿ ಮಾಡಿಸಿದ ತಾಣಗಳು ಎಂಬಂತೆ ಈ ಮೊದಲು ಅಭಿಪ್ರಾಯವಿತ್ತು. ಆದರೆ ಈಗದು ಬದಲಾವಣೆ ತರುತ್ತಿರುವ ಮಹಿಳೆಯರ ಆತ್ಮವಿಶ್ವಾಸ ಗಟ್ಟಿಗೊಳಿಸುವ ತಾಣವಾಗಿ ಬದಲಾಗಿದೆ.ಬರೀ ಧಾರವಾಹಿ ನೋಡಿ ಸಮಯ ಕಳೆಯುವವರ ಸಂಖ್ಯೆ ಕಡಿಮೆ ಮಾಡಿದೆ. ಚಿಕ್ಕವರಿದ್ದಾಗ ಮಾಡಿದ, ಮಧ್ಯವಯಸ್ಕರು ಅರ್ಧಕ್ಕೆ ಬಿಟ್ಟ ಹವ್ಯಾಸಗಳನ್ನು ಪೂರ್ತಿ ಮಾಡಿಕೊಳ್ಳುತ್ತಿದ್ದಾರೆ. ಇಂಥ ಚಟುವಟಿಕೆಗಳು ಜನರನ್ನು ಉತ್ಸಾಹದ ನದಿಯಲ್ಲಿ ಮೀಯುವಂತೆ ಮಾಡಿವೆ. 


ಭಾಗವಹಿಸಲು ವಯೋಮಿತಿಯಿಲ್ಲ, ಇತರ ಸದಸ್ಯರ, ನಿರ್ವಾಹಕರ ಪ್ರೋತ್ಸಾಹ ಈ ಸಮೂಹವನ್ನು ಬೆಳೆಸುತ್ತಿದೆ. ಹೀಗೊಂದು ಬದಲಾವಣೆ ಗಾಳಿ ಬೀಸಿದ್ದು ಸಂತೋಷ ತರುತ್ತಿದೆ. ಶಾರದಾ ಕಲಾ ವೇದಿಕೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ನಮ್ಮದು.


- ರೇಖಾ ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top