ಪ್ರತಿಯೊಂದು ದಿನ ರೋಗಿಗಳ ಪಕ್ಕದಲ್ಲಿರುವ ನರ್ಸ್‌ಗಳಿಗೆ ವಿಶೇಷ ದಿನಾಚರಣೆ

Upayuktha
0


ಬೆಂಗಳೂರು-ವೈಟ್‌ ಫೀಲ್ದ್‌: ಮೆಡಿಕವರ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ನರ್ಸಿಂಗ್ ಡೇಯನ್ನು ನರ್ಸ್‌ಗಳ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಮೆಡಿಕವರ್ ಆಸ್ಪತ್ರೆ ಮುಖ್ಯಸ್ಥ ಕೃಷ್ಣಮೂರ್ತಿ, ಹಿರಿಯ ಹೃದ್ರೋಗ ತಜ್ಞ ಡಾ. ರಾಘವೇಂದ್ರ ಚಿಕ್ಕಟೂರು, ಸರ್ಜಿಕಲ್‌ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ. ಕೌಶಿಕ್‌ ಸುಬ್ರಮಣಿಯನ್‌, ಮತ್ತು  ನರ್ಸೀಂಗ್‌ ಮುಖ್ಯಸ್ಥ ಶ್ರೀ ಕಾರ್ತಿಕ್ ಎಸ್ ಅವರ ನೇತೃತ್ವದಲ್ಲಿ ದೀಪ ಬೆಳಗಿಸುವ ಮೂಲಕ ಆರಂಭವಾಯಿತು.


ಕಾರ್ಯಕ್ರಮವನ್ನು ಸ್ವಾಗತ ನೃತ್ಯದಿಂದ ಆರಂಭಿಸಲಾಗಿದ್ದು, ನಂತರ ಶ್ರೀ ಕೃಷ್ಣಮೂರ್ತಿ ಅವರು ನರ್ಸ್‌ಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. 

ಪ್ರತಿಭಾ ಶಾಲಿ ನರ್ಸ್‌ಗಳಿಗೆ ಗೌರವ ಸೂಚಿಸಲಾಯಿತು ಮತ್ತು ನರ್ಸ್‌ಗಳಿಗಾಗಿ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನೂ ನೀಡಲಾಯಿತು. ಯಾವಾಗ್ಲೂ ರೋಗಿಗಳ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನರ್ಸ್‌ ಗಳು, ತಮ್ಮ ದಿನವನ್ನು ಸಂತಸದಿಂದ ಆಚರಿಸಿದರು.


ಸಾಂಸ್ಕೃತಿಕ ಕಾರ್ಯಕ್ರದಲ್ಲಿ ನರ್ಸ್‌ಗಳು ತಮ್ಮ  ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದವು. ಈ ವರ್ಷದ ಅಂತರಾಷ್ಟ್ರೀಯ ನರ್ಸಿಂಗ್ ದಿನದ ಥೀಮ್: “ನಮ್ಮ ನರ್ಸ್‌ಗಳು. ನಮ್ಮ ಭವಿಷ್ಯ. ಆರೈಕೆಯ ಆರ್ಥಿಕ ಶಕ್ತಿ” ಎಂಬುದು ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸಿತು.


ಮೆಡಿಕವರ್ ಆಸ್ಪತ್ರೆಯು ಪ್ರತಿದಿನವೂ ರೋಗಿಗಳ ಆರೈಕೆಯಲ್ಲಿ ಮುಖ್ಯಭಾಗವಹಿಸುತ್ತಿರುವ ನರ್ಸ್‌ಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
To Top