ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಹಿಂದಿ ಪ್ರಾಧ್ಯಾಪಕರಿಗೆ 6 ದಿನಗಳ ಭಾಷಾ ಕಾರ್ಯಾಗಾರ

Chandrashekhara Kulamarva
0

ಭಾರತೀಯ ಭಾಷಾ ಸಂಸ್ಥಾನ ಮೈಸೂರು ಅವರಿಂದ ಆಯೋಜನೆ


ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇಲ್ಲಿ ಮೇ 19 ಸೋಮವಾರದಿಂದ ಮೇ 24 ಶನಿವಾರದವರೆಗೆ ಆರು ದಿನಗಳ ಕಾಲ ಆಯ್ದ ಕನ್ನಡದ 60 ಹಾಗೂ ಹಿಂದಿಯ 40 ಭಾಷಾ ವಿಭಾಗದ ಪ್ರಾಥಮಿಕ, ಹೈಸ್ಕೂಲು, ಪಿ.ಯು.ಸಿ. ಮತ್ತು ಪದವಿ ಪ್ರಾಧ್ಯಾಪಕರಿಗೆ ಭಾಷಾ ಕಾರ್ಯಾಗಾರ ನಡೆಯಲಿದೆ.


ಇದಕ್ಕೆ ರಾಷ್ಟ್ರೀಯ ಪರೀಕ್ಷಣ ಸೇವೆ ಭಾರತ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಈ ಸಂಸ್ಥೆಗಳು ಸಹಯೋಗವನ್ನು ನೀಡುತ್ತಿವೆ. ಒಟ್ಟು ಆರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರ ಮೂರು ದಿನ ಆಫ್‌ಲೈನ್ ಮತ್ತು ಮೂರು ದಿನ ಆನ್‌ಲೈನ್ ಎನ್ನುವ ಹೈಬ್ರಿಡ್ ಮೋಡ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯ ಪರೀಕ್ಷಣ ಮತ್ತು ಮೌಲ್ಯನಿರ್ಧಾರಣೆ ಹಾಗೂ ಪ್ರಶ್ನಾಂಶ ಬರೆವಣಿಗೆ ಕುರಿತ ತರಬೇತಿ ನಡೆಯಲಿದೆ.


ದಿನಾಂಕ 19-05-2025ನೇ ಸೋಮವಾರ ಬೆಳಗ್ಗೆ 10.00 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಈ ಕಾರ್ಯಾಗಾರದ ಉದ್ಘಾಟನೆಯನ್ನು ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇದರ ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಪಂಕಜ್ ದ್ವಿವೇದಿ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ವಹಿಸಲಿದ್ದಾರೆ. ಆಫ್‌ಲೈನ್ ಮಾದರಿಯಲ್ಲಿ ನಡೆಯುವ ಮೂರು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಮುರಳೀಕೃಷ್ಣ ಕೆ ಎನ್ ವಹಿಸಲಿದ್ದಾರೆ. ಸಮಾರೋಪದ ಮಾತುಗಳನ್ನು ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀಧರ ಎಚ್ ಜಿ ಅವರು ಮಾಡಲಿದ್ದಾರೆ.


ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಂಕಜ್ ದ್ವಿವೇದಿ, ಪ್ರೊ. ರಾಧಾಕೃಷ್ಣ ಬೆಳ್ಳೂರು, ಡಾ. ಕುಮಾರಸ್ವಾಮಿ, ಡಾ. ಆರ್ ಶಕುಂತಲಾ, ಡಾ. ಮಂಜುನಾಥ ಎಂ., ಡಾ. ಮುರಳಿ ಮೋಹನ ಎನ್., ಕೆ.ಕೆ.ಪ್ರದೀಪ, ಎನ್. ಕಶ್ಯಪ್, ಡಾ. ಬೀರೇಶ್ ಕುಮಾರ್, ಡಾ. ಸಂಜಯ ಪ್ರಸಾದ್ ಶ್ರೀವತ್ಸ, ಸುಮಿತ್ರ ಮಿಶ್ರ ಇವರುಗಳ ಭಾಗವಹಿಸಲಿದ್ದಾರೆ.


ಆನ್‌ಲೈನ್‌ನಲ್ಲಿ ದಿನಾಂಕ 22-05-2025 ಗುರುವಾರದಿಂದ 24-05-2025ನೇ ಶನಿವಾರದವರೆಗೆ ನಡೆಯುವ ಕಾರ್ಯಾಗಾರದಲ್ಲಿ ಪ್ರಶ್ನಾಂಶವನ್ನು ದಾಖಲಿಸುವ ಕೆಲಸ ನಡೆಯುತ್ತದೆ. ಪೂರ್ಣ ಪ್ರಮಾಣದ ಸಮಾರೋಪ ಸಮಾರಂಭ ದಿನಾಂಕ 24-05-2025ನೇ ಶನಿವಾರ ಸಂಜೆ 4.00 ರಿಂದ 5.30ರವರಗೆ ಆನ್‌ಲೈನ್‌ನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top