ಸಾಧನಾ ಸಮಾವೇಶಕ್ಕೆ ಬಳ್ಳಾರಿ ನಗರದಿಂದ 20 ಸಾವಿರ ಜನ

Upayuktha
1 minute read
0




ಬಳ್ಳಾರಿ: ವಿಜಯನಗರ ಜಿಲ್ಲೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಅಂದಾಜು 20 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿಯ ಗಾಂಧಿನಗರದಲ್ಲಿರುವ ಅವರ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಮಹಾನಗರ ಪಾಲಿಕೆಯ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಯುವ ಮತ್ತು ಮಹಿಳಾ ಕಾಂಗ್ರೆಸ್ ಮುಖಂಡರ ಜೊತೆಗೆ ಸಮಾವೇಶ ಯಶಸ್ವಿಗೊಳಿಸುವ ಕುರಿತು ಸಭೆ ನಡೆಸಿ, ಚರ್ಚಿಸಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ, ಸಾವಿರಾರು ಕೋಟಿ ರೂ.ಗಳ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ, ಹೀಗಾಗಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಜನರ ಮನೆ, ಮನಗಳಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದರು.


ಸಭೆಯಲ್ಲಿ ಪಾಲಿಕೆಯ ಸದಸ್ಯರಾದ ಪಿ.ಗಾದೆಪ್ಪ, ಪ್ರಭಂಜನಕುಮಾರ್, ರಾಜಶೇಖರ, ವಿ.ಕುಬೇರ, ನೂರ್ ಮೊಹಮ್ಮದ್, ಜಬ್ಬಾರ್, ಮಿಂಚು ಸೀನಾ, ರಾಮಾಂಜನೇಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹುಸೇನ್ ಪೀರಾಂ, ಅಭಿಲಾಶ್, ಕಾಂಗ್ರೆಸ್ ಮುಖಂಡರಾದ ಭಂಭ ದಾದಾ, ಕಣೇಕಲ್ ಮೆಹಬೂಬಸಾಬ, ಡಿ.ಸೂರಿ, ಮಂಜುಳಾ, ಯಶೋದಾ, ಎಂ.ಸುಬ್ಬ ರಾಯುಡು, ಬಿಆರೆಲ್ ಸೀನಾ, ಶಿವರಾಜ, ಹೊನ್ನಪ್ಪ, ಹಗರಿ ಗೋವಿಂದ, ಪಿ.ರವಿ, ರಘುರಾಂ, ಶ್ರೀಕಾಂತ್, ಖಾದರ್, ಫರಾಜ್, ಎಂ.ಡಿ.ತೌಸಿಫ್, ನೂರ್, ತಬರೇಜ್, ಸಿಲಾರ್, ಅನ್ಸರ್, ಕವಿತಾ, ಚಂಪಾ ಚವ್ಹಾಣ್, ವಿಜಯಲಕ್ಷ್ಮೀ, ಗೌಸಿಯಾಬಿ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಭರತ್, ಥಿಯೇಟರ್ ಶಿವು, ಅಬ್ದುಲ್ ಬಾರಿ, ವೆಂಕಟ ನಾಯ್ಡು, ರಾಕಿ, ಚಾನಾಳ್ ಶೇಖರ್, ಮಡಿವಾಳಪ್ಪ, ಹಂದ್ರಾಳು ಸಂತೋಷ ಕುಮಾರ್‌, ಹಗರಿ ಕುಬೇರ ಸೇರಿದಂತೆ ಹಲವರು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter









إرسال تعليق

0 تعليقات
إرسال تعليق (0)
To Top