ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ

Chandrashekhara Kulamarva
0


ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ತೆರಳಲಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿದ್ದಾರೆ. ರಾಷ್ಟ್ರಪತಿ ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ. 

ದ್ರೌಪದಿ ಮುರ್ಮು, ಕುಮಾರಕೋಮ್ ನಿಂದ ಟೇಕ್ ಆಫ್ ಆದ ನಂತರ ನಿಲಕ್ಕಲ್ ನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಕಾರಿನಲ್ಲಿ ಪಂಪಾಗೆ ಹೋಗಿ ಇರುಮುಡಿ ಹೊತ್ತು ನಡೆಯುವರು. ದೇವಸ್ವಂ ಅತಿಥಿ ಗೃಹ ಅಥವಾ  ಶಬರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಇರುತ್ತಾರೆ.  ರಾಷ್ಟ್ರಪತಿಗಳ ಕಚೇರಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಈ ಸಂಬಂಧ ಸೂಚನೆ ಬಂದಿದ್ದು, ದ್ರೌಪದಿ ಮುರ್ಮು 18 ಮತ್ತು 19 ರಂದು ಶಬರಿಮಲೆಯಲ್ಲಿ ಇರುತ್ತಾರೆ. ಈ ತಿಂಗಳ 14 ರಂದು ಎಡವ ಮಾಸದ ಪೂಜೆಗಾಗಿ ದೇವಾಲಯದ ನಾಡ ತೆರೆಯಲಿದ್ದು, 19 ರಂದು ರಾತ್ರಿ 10 ಗಂಟೆಗೆ ಮುಚ್ಚಲಿದೆ. 

ಮೇ 18 ರಂದು ಪಾಲಾದಲ್ಲಿ ನಡೆಯುವ ಸೇಂಟ್ ಥಾಮಸ್ ಕಾಲೇಜು ಜಯಂತಿ ಆಚರಣೆಯಲ್ಲಿ ರಾಷ್ಟ್ರಪತಿ ಭಾಗವಹಿಸುವರು. ಮೇ 19 ರಂದು ಪಂಪಾಗೆ ಭೇಟಿ ನೀಡಿ ಶಬರಿಮಲೆಗೆ ಹೋಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top