ನಮ್ಮ ಯೋಚನೆಗಳು ಆಚಾರ ವಿಚಾರಗಳಿಗೆ ತಕ್ಕಂತೆ ಬದುಕು ರೂಪಗೊಳ್ಳುತ್ತದೆ: ವಿಜಿ ಶೆಟ್ಟಿ

Upayuktha
0




ತೆಂಕನಿಡಿಯೂರು: ನಮ್ಮ ಯೋಚನೆಗಳು ಆಚಾರ ವಿಚಾರಗಳಿಗೆ ತಕ್ಕಂತೆ ಬದುಕು ಕೂಡ ರೂಪಗೊಳ್ಳುತ್ತದೆ. ನಮ್ಮ ಬದುಕನ್ನು ಗೌರವಯುತವಾಗಿ ನಡೆಸಲು ಶಿಕ್ಷಣ ಮುಖ್ಯ. ನಮ್ಮನ್ನು ನಾವು ಮೊದಲು ಅರಿಯಬೇಕು ಎಂದು ಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಲಯನ್ ವಿಜಿ ಶೆಟ್ಟಿಯವರು ನುಡಿದರು. 

ಉಡುಪಿ ಅಂಬಾಗಿಲಿನ ಅಮೃತ್‌ಗಾರ್ಡನ್‌ನಲ್ಲಿ ಏರ್ಪಡಿಸಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಸದಸ್ಯರಾದ ಯಶ್‌ಪಾಲ್ ಎ ಸುವರ್ಣರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿವಿ ಮಟ್ಟದ ಎಂ ಎ ಇತಿಹಾಸ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ವಿಜೇತ ನಿಶಾ ಬಂಗೇರ, ಹಾಗೂ ಎಂ.ಎಸ್.ಡಬ್ಲ್ಯೂ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ವಿಜೇತ ಭವ್ಯಶ್ರೀ, ಬಿ.ಎಸ್.ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ವಿಜೇತ ಶ್ರೀನಿಧಿಯವರನ್ನು ಸನ್ಮಾನಿಸಲಾಯಿತು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ೫ ಮಂದಿ ಕ್ರೀಡಾಪಟುಗಳನ್ನೂ ಸನ್ಮಾನಿಸಲಾಯಿತು.

ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರದ ಮಾಜಿ ಪ್ರಾಂಶುಪಾಲರಾದ ಚಂದ್ರಶೇಖರ ದೋಮರವರು ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಉತ್ತಮ ನಡತೆಯನ್ನು ರೂಪಿಸಿಕೊಳ್ಳಬೇಕು, ಸಹನೆ, ತಾಳ್ಮೆ, ಸೌಹಾರ್ದ ಭಾವನೆ, ಏಕಾಗ್ರತೆ ಹೃದಯ ವೈಶಾಲ್ಯತೆ ಮುಂತಾದ ಜೀವನ ಮೌಲ್ಯಗಳು ಬದುಕನ್ನ ಸಾರ್ಥಕ ಗೊಳಿಸುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿತ್ಯಾನಂದ ವಿ ಗಾಂವಕರ ಕಾಲೇಜಿನ ವರದಿಯನ್ನು ವಾಚಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಪಠ್ಯೇತರ ಹಾಗೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ ಹಾಗೂ ಇತರ ಬಹುಮಾನಗಳನ್ನು ವಿತರಿಸಲಾಯಿತು.

ಲಯನ್ ಉಡುಪಿ ಅಮೃತ್ ಅಧ್ಯಕ್ಷರಾದ ಲಯನ್ ಭಾರತಿ ಎಚ್.ಎಸ್., ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಪೈ, ಮಾಜಿ ಪ್ರಾಂಶುಪಾಲರದ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಡಾ. ರಘು ನಾಯ್ಕ ಮತ್ತು ಪ್ರಶಾಂತ್ ನೀಲಾವರ, ಐಕ್ಯೂಎಸಿ ಸಂಚಾಲಕರಾದ ಡಾ.ಮೇವಿ ಮಿರಾಂಡ, ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್ಟ್ , ಭೌತಶಾಸ್ತ್ರ ಸಹಪ್ರಾಧ್ಯಾಪಕರಾದ ಹಮಿದಾ ಬಾನು, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ ಉದಯ್ ಶೆಟ್ಟಿ ಕೆ, ಶ್ರೀಮತಿ ಸುಷ್ಮಾ ಟಿ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಅಧ್ಯಕ್ಷರಾದ ರಿಷಿತ್ ಎನ್ ಸಾಲಿಯಾನ್ ಅಂತಿಮ ಬಿ ಎಸ್ ಡಬ್ಲ್ಯೂ, ನೈನಾ ಶೆಟ್ಟಿ ಅಂತಿಮ ಎಂ ಎ ಕನ್ನಡ, ಕಾರ್ಯದರ್ಶಿಗಳಾದ ಕೀರ್ತಿ ತೃತೀಯ ಬಿಎಸ್ಸಿ, ಓಂಕಾರ್ ಅನಿಲ್ ಶೆಟ್ಟಿ ದ್ವಿತೀಯ ಎಂ ಕಾಂ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ನೈನಾ ಸ್ವಾಗತಿಸಿದರು, ಬಿಸಿಎ ವಿದ್ಯಾರ್ಥಿನಿ ಶರಣ್ಯ ನಿರೂಪಿಸಿದರು ಹಾಗೂ ಶಿವಾನಿ ಅಂತಿಮ ಎಂ.ಎಸ್ ಡಬ್ಲ್ಯೂ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top