ಇತ್ತೀಚಿನ ದಿನಗಳಲ್ಲಿ ಯಲ್ಲಾಪುರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಬಿಟ್ಟು ಅನ್ಯ ಭಾಷೆ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾಕೆ ಹೀಗೆ? ಇಲ್ಲಿಯೇ ಹುಟ್ಟಿ ಇಲ್ಲಿಯೆ ಬೆಳೆದು ಕನ್ನಡ ನೆಲದಲ್ಲಿ ಕೆಲಸ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿವವರಿಗೆ ಇಲ್ಲಿ ಮಣ್ಣಿನ ಭಾಷೆ ಬೇಡವಾಯ್ತಾ? ಇದರಿಂದ ನಮ್ಮ ಸಂಸ್ಕೃತಿ, ನಮ್ಮ ನುಡಿ ನಶಿಸಿ ಹೋಗುತ್ತಿದೆ. ಮುಂದೊಂದು ದಿನ ನಮ್ಮ ಯಲ್ಲಾಪುರ ಅನ್ಯ ಭಾಷಿಕರ ಊರಾದರೂ ಆಶ್ಚರ್ಯವಿಲ್ಲ. ಕೊಂಕಣಿ, ಮರಾಠಿ, ತೆಲುಗು ಭಾಷಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾಕೆ ಅವರು ಕನ್ನಡಿಗರಲ್ಲವೇ? ಕೆಲವರು ಕನ್ನಡ ಬಂದರೂ ಸಹ ಕನ್ನಡದಲ್ಲಿ ವ್ಯವಹಾರ ಮಾಡುವುದಿಲ್ಲ. ಅದನ್ನು ನೋಡಿದರೆ ತುಂಬಾ ಬೇಸವಾಗುತ್ತದೆ. ಬೇರೆ ಬೇರೆ ಭಾಷೆ ಮಾತನಾಡಲಿಕ್ಕೆ ಅವರದ್ದೇ ಆದ ರಾಜ್ಯ ಇದೆ.
ಬೇರೆ ಬೇರೆ ರಾಜ್ಯಗಳಲ್ಲಿ ಪ್ರತಿಯೊಬ್ಬರೂ ಆವರ ಭಾಷೆಯನ್ನು ಕೇವಲ ಭಾಷೆಯಾಗಿ ಅಲ್ಲದೇ ಆವರ ಒಂದು ಗುರುತಾಗಿ ಕಾಣುತ್ತಾರೆ. ಹೆಮ್ಮೆಯಿಂದ ಗೌರವದಿಂದ ಮಾತನಾಡುತ್ತಾರೆ. ಅದರೆ ನಮ್ಮಲ್ಲಿ? ಕಾಟಾಚಾರದ ಪ್ರೀತಿ ಗೌರವ. ನವೆಂಬರ್ ಒಂದರಂದು ಮಾತ್ರ ಅದೆಲ್ಲಿ ಇರುತ್ತೋ ಗೊತ್ತಿಲ್ಲ, ಕನ್ನಡದ ಮೇಲಿನ ಪ್ರೀತಿ ಗೌರವ ಎಲ್ಲಾನೂ ಉಕ್ಕಿ ಉಕ್ಕಿ ಬರುತ್ತದೆ. ಅದೂ ಕೇವಲ ಒಂದು ದಿನಕ್ಕೆ ಮೀಸಲಾಗಿರುತ್ತದೆ. ಉಳಿದ ದಿನ ಬೇರೆ ಬೇರೆ ಭಾಷೆಯ ಗುಲಾಮರಾಗಿ ಬದುಕುವುದು.
ನಮ್ಮಲ್ಲಿ ಕನ್ನಡ ಉಳಿಯ ಬೇಕಾದರೆ ಯಲ್ಲಾಪುರದಲ್ಲಿ ಕನ್ನಡ ಹಬ್ಬಗಳನ್ನು ಆಚರಿಸಬೇಕು. ಕನ್ನಡದ ಪ್ರತಿಭೆಗಳನ್ನು ಮುಂದಕ್ಕೆ ತರಬೇಕು. ಶಾಲಾ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಮಿಗಿಲಾಗಿ ಮನೆಯೇ ಮೊದಲ ಪಾಠಶಾಲೆ ಅನ್ನೋ ಹಾಗೆ ಭಾಷಾಭಿಮಾನ ಮನೆಯಿಂದಲೇ ಶುರು ಆಗಬೇಕು. "ಕನ್ನಡ ಬಳಸಿ, ಕನ್ನಡ ಉಳಿಸಿ" ಅನ್ನುವ ಘೋಷ ವಾಕ್ಯ ಮೊಳಗಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪರಿಶ್ರಮ ಪಟ್ಟರೆ ಮಾತ್ರ ಕನ್ನಡ ಉಳಿಯಲು ಸಾಧ್ಯ. ಇಲ್ಲವಾದರೆ ಕನ್ನಡವನ್ನು ಮೂರನೇ ಆಯ್ಕೆಯಾಗಿ ಮುಂಬರುವ ದಿನಗಳಲ್ಲಿ ನೋಡಬೇಕಾಗುತ್ತದೆ.
ಕೊನೆಯದಾಗಿ, ಯಾರ್ಯಾರು ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುತ್ತಾರೋ ಆವರ ಆಧಾರ್ ಕಾರ್ಡ್, ರೇಶನ್ ಕಾರ್ಡ್ ರದ್ದುಗೊಳಿಸಿ ಅಂತ ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಿ.
ಜೈ ಕರ್ನಾಟಕ, ಜೈ ಭುವನೇಶ್ವರಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು...
ಕನ್ನಡವೇ ಸತ್ಯ ಕನ್ನಡವೇ ನಿತ್ಯ....
-ಮನೋಜ್ ವಿ. ಪಾಲೇಕರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ