ಕಲಾ ಪ್ರವೀಣ ಪ್ರಶಸ್ತಿಗೆ ವೈ.ಕೆ ಸಂಧ್ಯಾ ಶರ್ಮ ಆಯ್ಕೆ

Upayuktha
0


ಮಣಿಪಾಲ: ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ ಕೆ ಸಂಧ್ಯಾ ಶರ್ಮ ಅವರು 2025 ನೇ ಸಾಲಿನ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣ' ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.


ಪರ್ಕಳದ ಸರಿಗಮ ಭಾರತಿ ಸಭಾಂಗಣದಲ್ಲಿ ಏ.19ರಂದು ನಡೆಯಲಿರುವ ರಾಗ ಧನ ಉಡುಪಿ ಸಂಸ್ಥೆಯ ರಾಗರತ್ನ ಮಾಲಿಕೆ-36ನೇ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಇವರು ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ  ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಕನ್ನಡ ಎಂ.ಎ ಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರು, ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 55 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತಾ 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಖ್ಯಾತಿ ಇವರಿಗಿದೆ. ಜನಪ್ರಿಯ ಲೇಖಕಿಯಾದ ಇವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 950ಕ್ಕೂ ಮಿಗಿಲಾದ ನಾಟಕ-ನೃತ್ಯ-ಸಂಗೀತ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡ ಹಿರಿಮೆ ಇವರದ್ದು. ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಮಾನ್ಯತೆ ಪಡೆದ ಕಲಾವಿದೆ ಇವರು.


ಕಳೆದ 48 ವರ್ಷಗಳಿಂದ ತಮ್ಮದೇ ಆದ 'ಸಂಧ್ಯಾ ಕಲಾವಿದರು' ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ 'ಸಂಧ್ಯಾ ಪತ್ರಿಕೆ' ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಸಂದ  ಪ್ರಶಸ್ತಿಗಳು ಅನೇಕ. 


ಈಶ್ವರಯ್ಯ ಅನಂತಪುರ ಅವರ ಹೆಸರನಲ್ಲಿ ಅವರ ಕುಟು೦ಬವು ವರ್ಷ೦ಪ್ರತಿ ಕೊಡಮಾಡುವ 'ಕಲಾ ಪ್ರವೀಣ' ಪ್ರಶಸ್ತಿಗೆ ಈ ಬಾರಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅವರು ಆಯ್ಕೆಯಾಗಿರುತ್ತಾರೆ ಎಂದು ಈಶ್ವರಯ್ಯ ಅನಂತಪುರ ಅವರ ಸಹೋದರ ಶ್ರೀಕೃಷ್ಣಯ್ಯ ಅನಂತಪುರ, ಮಗ ಶೈಲೇಂದ್ರ ಅನಂತಪುರ, ಸೊಸೆ ಜ್ಯೋತಿ ಶೈಲೇಂದ್ರ ಮತ್ತು ಕುಟು೦ಬ ವರ್ಗದವರು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top