ಚೀನಾದಲ್ಲಿ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸಂಚಲನ

Upayuktha
0



ಬೀಜಿಂಗ್: ಚೀನಾ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾದ ಹೆಬೈ ಪ್ರಾಂತ್ಯದ ಕ್ಸಿಯಾಂಗನ್ ಸಿಟಿಯಲ್ಲಿ 10ಜಿ ನೆಟ್‌ವರ್ಕ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಾಗಿದೆ. ಈ 10ಜಿ ಸೇವೆ ಜಾಗತಿಕ ಡಿಜಿಟಲ್ ಮೂಲಭೂತ ಸೌಕರ್ಯದ ಚಿತ್ರಣವನ್ನು ಬದಲಿಸಿದೆ. 

ಚೀನಾ ಸರ್ಕಾರದ ಟೆಲಿಕಮ್ಯೂನಿಕೇಶನ್ ಭಾಗಾಗಿ ಹುವೈ ಹಾಗೂ ಯುನಿಕಾಮ್ ಜಂಟಿಯಾಗಿ ಈ 10ಜಿ ಸೇವೆ ಅಭಿವೃದ್ಧಿಪಡಿಸಿ ಚಾಲನೆ ನೀಡಿದೆ.  ಈ 10ಜಿಯಲ್ಲಿ ಊಹೆಗೆ ನಿಲುಕದ ವೇಗದ ಇಂಟರ್ನೆಟ್ ಲಭ್ಯವಿದೆ. ಭಾರತದಲ್ಲಿರುವ 5ಜಿ  ಸೇವೆಯ ಡೌನ್ಲೋಡ್ ಹಾಗೂ ಅಪ್ಲೋಡ್, ಲ್ಯಾಟೆನ್ಸಿ ಸ್ಪೀಡ್‌ಗೂ 10ಜಿ ಸೇವೆಯ ಸ್ಪೀಡ್‌ಗೂ ಅಜಗಜಾಂತರ ವ್ಯತ್ಯಾಸವಿದೆ.


ಮಾಧ್ಯಮ ವರದಿ ಪ್ರಕಾರ ಚೀನಾದಲ್ಲಿ ಆರಂಭಿಸಿರುವ ವಿಶ್ವದ ಮೊದಲ 10 ಜಿ ಸೇವೆಯ ಡೌನ್ಲೋಡ್ ಸ್ಪೀಡ್ ಬರೋಬ್ಬರಿ 9,834Mbps. ಇನ್ನು ಅಪ್‌ಲೋಡ್ ಸ್ಪೀಡ್ 1,008Mbps. ಬಳಕೆದಾರ ಯಾವುದೇ ಇಂಟರ್ನೆಟ್ ಬಳಕೆ ಮಾಡುವಾಗ ಅಂದರೆ ವೆಬ್‌ಸೈಟ್, ಆ್ಯಪ್, ಯೂಟ್ಯೂಬ್, ವಿಡಿಯೋ, ಮೂವಿ, ರೀಲ್ಸ್ ಸೇರಿದಂತೆ ಯಾವುದೇ ನೆಟ್ ಕನೆಕ್ಟೆಟ್ ಸೈಟ್ ಅಥವಾ  ಆ್ಯಪ್ ಕ್ಲಿಕ್ ಮಾಡಿದರೆ ಲ್ಯಾಟೆನ್ಸಿ ಕೇವಲ 3 ಮಿಲಿ ಸೆಕೆಂಡ್ ಮಾತ್ರ. ಕ್ಲಿಕ್ ಮಾಡಿದ ಬೆನ್ನಲ್ಲೇ ಆ್ಯಪ್ ಅಥವಾ ಸೈಟ್ ಕಾರ್ಯಪ್ರವೃತ್ತಗೊಳ್ಳಲಿದೆ. 


ಚೀನಾದ  10 ಜಿ ಬ್ರಾಡ್‌ಬ್ಯಾಂಡ್ ಸೇವೆ,  ಜಗತ್ತಿನಲ್ಲಿರುವ ಅತೀ ವೇಗ ಇಂಟರ್ನೆಟ್ ಎನ್ನಲಾಗುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಸಿಂಗಾಪೂರ ಸೇವೆಗಿಂತ ವೇಗವಾಗಿದೆ. 10ಜಿ ನೆಟ್‌ವರ್ಕ್ ಸ್ಪೀಡ್ ಒಂದು ಟಚ್ ನೊಂದಿಗೆ  ಕಣ್ಮುಚ್ಚಿ ತೆರೆಯುವುದರೊಳಗೆ ಡೌನ್ಲೋಡ್ ಆಗಿರುತ್ತದೆ. ಉದಾಹರಣೆಗೆ 20ಜಿಬಿ ಗಾತ್ರದ 4ಕೆ ರೆಸಲ್ಯೂಶನ್ ಹೊಂದಿರುವ ಸಿನಿಮಾವನ್ನು ಕೇವಲ 20 ಸೆಕೆಂಡ್‌ನಲ್ಲಿ ಡೌನ್ಲೋಡ್ ಮಾಡಲು ಸಾಧ್ಯವಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top