ವಿಪ್ರವೇದಿಕೆ ಕೋಡಿಕಲ್: ದಶಮಾನೋತ್ಸವ ಪರ್ವ, ನೂತನ ಪದಾಧಿಕಾರಿಗಳ ಆಯ್ಕೆ

Upayuktha
0





ಮಂಗಳೂರು: ದಶಮಾನೋತ್ಸವ ಸಂಭ್ರಮದಲ್ಲಿರುವ ವಿಪ್ರ ವೇದಿಕೆ (ರಿ) ಯ ನೂತನ ಪದಾಧಿಕಾರಿಗಳ ಆಯ್ಕೆ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥಾಪಕರಲ್ಲೋರ್ವರಾದ ಶ್ರೀ ವಿಶುಕುಮಾರ್ ಜೋಯಿಸರ ಮನೆ "ಬೆನಕ"ದಲ್ಲಿ ಜರಗಿತು.


ಬ್ರಹ್ಮ ತೇಜಸ್ಸನ್ನು ಕಾಯ್ದುಕೊಂಡು ಬ್ರಾಹ್ಮಣ್ಯವನ್ನ ಜಗತ್ತಿಗೇ ಆದರ್ಶವಾಗಿ ನೀಡಿ, ನಡೆಸಿಕೊಂಡು ಹೋಗುವುದಕ್ಕೆ ನಾವು ಶ್ರಮಿಸಬೇಕಾಗಿದೆ. ಆ ಮೂಲಕ ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಮಾತಿಗೆ ಬೆಲೆ ಬರುತ್ತದೆ. ವಿಶ್ವಗುರು ಭಾರತದ ಶ್ರೇಷ್ಠ ಪರಂಪರೆಯ ಹರಿಕಾರರಾಗಿ ನಾವು ಕಾಣಿಸಿಕೊಳ್ಳಬೇಕಾಗಿದೆ. ಅದುವೇ ಜಗದ ಆದರ್ಶವೂ ಆಗುತ್ತದೆ. ನಮ್ಮೀ ವಿಪ್ರ ವೇದಿಕೆ ಕೂಡಾ ದಶವರ್ಷಗಳ ಕಾಲ ಸಮಾಜಮುಖೀ ಕಾರ್ಯಗಳಿಂದ ಗುರುತಿಸಿಕೊಂಡಿದೆ ಅದನ್ನು ಕಾಯ್ದುಕೊಂಡು ಬರೋಣ. ಒಮ್ಮನದಿಂದ ಬದುಕೋಣ" ಎಂದು ನಿರ್ಗಮನಾಧ್ಯಕ್ಷ ಶ್ರೀಧರ ಹೊಳ್ಳರು ಬ್ರಹ್ಮ ಸಮಾಜಕ್ಕೆ ಕರೆಯಿತ್ತರು.


ಬಳಿಕ ಈ ಪರ್ವಕಾಲದ ಸದುಪಯೋಗಪಡಿಸಿಕೊಳ್ಳಲು ಹೊಸ ತಂಡದ ರಚನೆಯಾಯಿತು.

ವರ್ಕಾಡಿ ರವಿ ಅಲೆವೂರಾಯ ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿಶ್ರೀ ವಿಶ್ವೇಶ್ವರ ತೆಕ್ಕೆಕೆರೆಯವರು, ಕಾರ್ಯದರ್ಶಿಯಾಗಿ ದುರ್ಗಾದಾಸ್ ಕಟೀಲು, ಕಿಶೋರ ಕೃಷ್ಣ ಖಚಾಂಚಿಯಾದರು.


ಟ್ರಸ್ಟಿಗಳಾದ ಜಯರಾಮ ಪದಕಣ್ಣಾಯ, ವಿಶುಕುಮಾರ್ ಜೋಯಿಸರು, ಕೆ.ಗಿರೀಶ್ ರಾವ್, ಅನೂಪ್ ರಾವ್, ಬಾಗ್ಲೋಡಿ, ಪ್ರಭಾವತಿ ಮಡಿ, ಶ್ರೀಮತಿ ವಿದ್ಯಾ ಗಣೇಶ್ ಹಾಗೂ ಸದಸ್ಯರುಗಳು ಮತ್ತು ವಿಪ್ರಬಾಂಧವರು ಉಪಸ್ಥಿತರಿದ್ದರು.


ಕಾರ್ಯದರ್ಶಿ ದುರ್ಗಾದಾಸ್ ನಿರ್ವಹಿಸಿದರೆ, ಖಚಾಂಚಿ ಕಿಶೋರ್ ಕೃಷ್ಣ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top