ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆ ಶಾಖೆಯ ಆಶ್ರಯದಲ್ಲಿ ದಾವಣಗೆರೆ ಜಿಲ್ಲೆಯ ಆನಗೋಡಿನ ಪವಾಡರಂಗವ್ವನಹಳ್ಳಿ ತೋಟದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಶ್ರೀಮತಿ ಸುಮಾ ಏಕಾಂತಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮನರಂಜನೆ, ರಸರಂಜನೆ, ಅಂತ್ಯಾಕ್ಷರಿ, ಗಾಯನ ನಡೆಯಿತು. ದಾವಣಗೆರೆಯ ಖ್ಯಾತ ಗಾಯಕಿ ವಿದುಷಿ ಶೀಲಾ ನಟರಾಜ್ ಸ್ವರ್ಗಸ್ಥರಾದ ಕಾರಣ ಅವರಿಗೆ ಒಂದು ನಿಮಿಷ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ದಂಪತಿ, ಮಹೇಶ್ವರಯ್ಯ ದಂಪತಿ, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಶಿಲ್ಪಾ ಉಮೇಶ್, ಕುಸುಮ ಲೋಕೇಶ್ ದಂಪತಿ, ವಿಜಯಗಣೇಶ್ ರಾವ್, ಸಂಧ್ಯಾ ಶ್ರೀನಿವಾಸ್, ನಿರ್ಮಲಾ ರಾಜೇಂದ್ರ ಬಾಬು, ಮಮತಾ ಕೊಟ್ರೇಶ್, ಲಕ್ಷ್ಮೀ ಅಂಜನೇಯ, ಸಾಲಿಗ್ರಾಮ ಸಂದೀಪ್ ಶೆಣೈ, ಲಕ್ಷ್ಮೀ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ