ಉಡುಪಿ: ಗೀತಾ ಮಂದಿರದಲ್ಲಿ ವಿಶ್ವಕಲಾದಿನ ಆಚರಣೆ

Upayuktha
0



ಉಡುಪಿ: ಉಡುಪಿಯ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಜಾನಪದೀಯ ಆಚರಣೆಗಳತ್ತ ಕಲಾತ್ಮಕವಾಗಿ ಬೆಳಕು ಚೆಲ್ಲುವ ವಿಶಿಷ್ಟ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೋಮವಾರ ಗೀತಮಂದಿರದಲ್ಲಿ ಪ್ರದರ್ಶನ ವೀಕ್ಷಿಸಿ ಉದ್ಘಾಟಿಸಿದರು.


ಉಡುಪಿ ಉತ್ಸವ ನಗರಿ, ವೈವಿಧ್ಯಮಯ ಆಚರಣೆ, ಜಾನಪದ ಸೊಗಡಿನೊಂದಿಗೆ ಶ್ರೀಕೃಷ್ಣನ ಧಾರ್ಮಿಕ ಉತ್ಸವ ಚಿತ್ರಗಳ ಮೂಲಕ ನೋಡುವುದೇ ಒಂದು ಸಂಭ್ರಮ. ಹಿರಿಯ ಛಾಯಾಚಿತ್ರ ಕಲಾವಿದ ಆಸ್ಟ್ರೋ ಮೋಹನ್ ಅವರು ಕಲಾತ್ಮಕವಾಗಿ ಸೆರೆ ಹಿಡಿದ ಚಿತ್ರಗಳು ಯಾತ್ರಾರ್ಥಿಗಳು, ಪ್ರವಾಸಿಗರೂ ವೀಕ್ಷಿಸಲೆಂದು ಗೀತಮಂದಿರದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಭಾರತ ದರ್ಶನ ಕಾರ್ಯಕ್ರಮದ ಅಂಗವಾಗಿ ಈ ಛಾಯಾಚಿತ್ರ ಪ್ರದರ್ಶನವನ್ನು ಜೋಡಿಸಿಕೊಳ್ಳಲಾಗಿದೆ ಎಂದು ಶ್ರೀಪಾದರು ನುಡಿದರು.


ಉಡುಪಿಯನ್ನು ಕಲಾತ್ಮಕವಾಗಿ ಬಿಂಬಿಸುವ 24 ಬೃಹತ್ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಕಲಾತ್ಮಕ ಫ್ರೇಮ್ ಹಾಕಿ ಓರಣವಾಗಿ ಇರಿಸಲಾಗಿದೆ. ಕಲಾಸಕ್ತರು ಪ್ರೋತ್ಸಾಹಿಸಬೇಕು ಎಂದು ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ವಿನಂತಿಸಿದರು.


ದಿವಾನರಾದ ನಾಗರಾಜ ಆಚಾರ್ಯ, ಭಾರತ್ ಮೇಳದ ಸಂಚಾಲಕ ರಮಣಾಚಾರ್ಯ, ಕಾರ್ಯದರ್ಶಿ ರತೀಶ ತಂತ್ರಿ, ಅಂತಾರಾಷ್ಟ್ರೀಯ ಕಲಾವಿದ  ಗಂಜೀಫ ರಘುಪತಿ ಭಟ್, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top