ಕೊಕ್ಕರ್ಣೆ: ಎಸ್ಎಸ್‌ಎಲ್‌ಸಿ ಅನಂತರದ ಪಿ.ಯು ಶಿಕ್ಷಣ ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಮತ್ತು ವೃತ್ತಿ ಬದುಕನ್ನು ನಿಧ೯ರಿಸುವ ಶೈಕ್ಷಣಿಕ ಹಂತವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಆಸಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಷಯಗಳ ಆಧರಿತ ಕೇೂರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವು ದರಲ್ಲಿ ಶಿಕ್ಷಕರು ಮತ್ತು ಹೆತ್ತವರು ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ.
ಬಡತನ ಎಂದಿಗೂ ವಿದ್ಯಾರ್ಜನೆಯ ಸಾಧನೆಗೆ ಎಂದಿಗೂ ತೊಡಕಾಗುವ ಪರಿಸ್ಥಿತಿ ಇಂದಿಲ್ಲ. ಆದಷ್ಟು ಮಟ್ಟಿಗೆ ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಶೈಕ್ಷಣಿಕ ಆರ್ಹತೆ ಗಳಿಸಿಕೊಂಡಿರುವುದು ಮುಂದಿನ ವೃತ್ತಿ ಬದುಕಿನ ಉನ್ನತಿಗೆ ಅದು ಅಗತ್ಯ ಶಕ್ತಿಯಾಗಿ ನಿಲ್ಲುತ್ತದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.
ಅವರು ಕೊಕ್ಕರ್ಣೆ ಸಮೀಪದ ನುಕ್ಕೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಒಂದು ದಿನದ ಉನ್ನತ ಶಿಕ್ಷಣ ಮತ್ತು ವೃತ್ತಿ ಮಾಗ೯ದಶ೯ನ ಕಾರ್ಯಕ್ರಮ ಉದ್ಘಾಟನೆಗೈದು ವಿಶೇಷ ಉಪನ್ಯಾಸವಿತ್ತರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಬೇಕಾದರೆ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೊಂದೇ ಸಾಕಾಗುವುದಿಲ್ಲ ಬದಲಾಗಿ ಕೌಶಲಾ ಸಾಮರ್ಥ್ಯ, ಇಚ್ಚಾಶಕ್ತಿ, ಸಂವಹನ ಪ್ರತಿಭೆಯನ್ನು ಎಳೆಯದರಲ್ಲಿಯೇ ಸಾಧಿಸಿಕೊಂಡಾಗ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ಸುಲಭ ಸಾಧ್ಯವಾಗುತ್ತದೆ" ಎಂದು ಅವರು ನುಡಿದರು.
ಶಾಲಾ ಮುಖ್ಯಸ್ಥ ವಿಜಯಕುಮಾರ್ ಸಭೆಯ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕ ಸತೀಶ್. ಜಿ ಸ್ವಾಗತಿಸಿದರು. ರವಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಸುಜಾತ ಕುಮಾರಿ ವಂದಿಸಿದರು. ಶಿಕ್ಷಕಿಯರಾದ ಪ್ರೀತಿ ಎಂ., ಸಪ್ನ ಗಾಂವ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ