ಡಾ ಎಲ್ ಸುಬ್ರಹ್ಮಣ್ಯಂ ಗೆ ಸಂಗೀತ ಕಲಾವಾರಿಧಿ, ಡಾ. ವರಖೇಡಿ ಸಹಿತ ವಿದ್ವಾಂಸರಿಗೆ ವಿಶ್ವೇಶತೀರ್ಥಾನುಗ್ರಹ ಪ್ರಶಸ್ತಿ
ಉಡುಪಿ: ಪೆರಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಪೇಜಾವರ ಮಠ ಉಡುಪಿ, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವ ಮಹಾಮಂಡಲಗಳ ಸಂಯುಕ್ತ ಆಶ್ರಯದಲ್ಲಿ ವೈಭವದಿಂದ ನೆರವೇರಿದ ಭಕ್ತಿ ಸಿದ್ಧಾಂತೋತ್ಸವ ಹಾಗೂ ರಾಮೋತ್ಸವದ ಧರ್ಮಸಭೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ನಿಯೋಜಿತರಾದ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್ ಡಾ ಎಲ್ ಸುಬ್ರಹ್ಮಣ್ಯಂ ಅವರಿಗೆ ಸಂಗೀತ ಕಲಾವಾರಿಧಿ ಬಿರುದಿನೊಂದಿಗೆ ಪ್ರಶಸ್ತಿ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ ಶ್ರೀನಿವಾಸ ವರಖೇಡಿ, ಪೂರ್ಣಪ್ರಜ್ಞ ಸಂಸೋಧನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ ಆನಂದ ತೀರ್ಥ ನಾಗಸಂಪಿಗೆ, ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮುಖ್ಯಸ್ಥ ಪಗಡಾಲ ಆನಂದ ತೀರ್ಥಾಚಾರ್ಯ, ಮಹಾಮಹೋಪಾಧ್ಯಾಯ ವಿದ್ವಾನ್ ಅದ್ಯಪಾಡಿ ಹರಿದಾಸ ಭಟ್ ಅವರಿಗೆ ಶ್ರೀ ವಿಶ್ವೇಶತೀರ್ಥಾನುಗ್ರಹ ಪ್ರಶಸ್ತಿ, ಹಾಗೂ ಡಾ ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಶ್ರೀ ರಾಮವಿಠಲಾನುಗ್ರಹ ಪ್ರಶಸ್ತಿಯನ್ನಿತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹಿಸಿದರು.
ಅದೇ ರೀತಿ ಹಿರಿಯ ಯಕ್ಷಗಾನ ಕಲಾವಿದ ಕೆ ಗೋವಿಂದ ಭಟ್, ಉದ್ಯಮಿ, ಸಾಮಾಜಿಕ ಧುರೀಣರಾದ ಡಾ ಜಿ ಶಂಕರ್, ಆದರ್ಶ ಆಸ್ಪತ್ರೆ ನಿರ್ದೇಶಕ ಡಾ ಜಿ ಎಸ್ ಚಂದ್ರ ಶೇಖರ್, ಚಿತ್ರಕಲಾವಿದ ಪಿ ಎನ್ ಆಚಾರ್ಯಅವರಿಗೆ ರಾಮೋತ್ಸವ ಪುರಸ್ಕಾರ 2025, ಆಳ್ವಾಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ ಎಂ ಮೋಹನ ಆಳ್ವ, ಕಟೀಲು ದೇವಳದ ಆನುವಂಶಿಕ ಅರ್ಚಕರುಗಳಾದ ವಾಸುದೇವ ಆಸ್ರಣ್ಣ, ಹಿರಿಯ ಜ್ಯೋತಿಷಿ ಪಾವಂಜೆ ಕೃಷ್ಣ ಭಟ್, ಪಾಜಕ ಮಧ್ವ ಮಠದ ವ್ಯವಸ್ಥಾಪಕ ಮಾಧವ ಉಪಾಧ್ಯಾಯರು, ವಿಶ್ವ ಹಿಂದು ಪರಿಷತ್ ಮಾಜಿ ಪ್ರಾಂತ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್, ಮೂಡಬಿದಿರೆ ಅಲಂಗಾರು ಮಹಾಲಿಂಗೇಶ್ವರ ದೇವಳದ ಆನುವಂಶಿಕ ಅರ್ಚಕ ಆಡಳಿತ ಮೊಕ್ತೇಸರ ಈಶ್ವರ ಭಟ್, ಕುಡುಪು ಅನಂತಪದ್ಮನಾಭ ದೇವಸ್ಥಾನದ ಆನುವಂಶಿಕ ಅರ್ಚಕ ಕುಡುಪು ನರಸಿಂಹ ಭಟ್, ಪ್ರಸಿದ್ಧ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ, ಗೋಡಂಬಿ ರಫ್ತು ಉದ್ಯಮಿ ಮೂಡಬಿದಿರೆ ಅನಂತ ಕೃಷ್ಣ ರಾವ್, ಹುಲಿಕೋಲದ ದೈವ ನರ್ತಕ ಗುಡ್ಡ ಪಾಣಾರ, ಪುತ್ತೂರು ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಸೇಸಪ್ಪ ರೈ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್, ಭೌತಶಾಸ್ತ್ರಜ್ಞ ಡಾ ಎ ಪಿ ಭಟ್, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರೊ ಶಂಕರ್, ಪಾಕತಜ್ಞ ಕೊಡಂಗಳ ವಾಸುದೇವ ಭಟ್, ಹಡಿಲು ಭೂಮಿ ಕೃಷಿ ಸಾಧಕ ಮುಕುಂದ ಭಟ್ ಕುಂಜಾರುಗಿರಿ, ವಿದ್ಯೋದಯ ಟ್ರಸ್ಟ್ ಅಧ್ಯಕ್ಷ ಉದ್ಯಮಿ ನಾಗರಾಜ ಬಲ್ಲಾಳ್, ಖಜಾಂಚಿ ಪದ್ಮರಾಜ ಆಚಾರ್ಯ, ಬೆಂಗಳೂರಿನ ಉದ್ಯಮಿ ರಾಮ್ ಪ್ರಸಾದ್, ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಶ್ರೀ ಕೃಷ್ಣಬಾಲನಿಕೇತನದ ಉಪಾಧ್ಯಕ್ಷ ಪ್ರೊ ಕೆ ಕಮಲಾಕ್ಷ, ಅಖಿಲ ಭಾರತ ಮಾಧ್ವಮಹಾಂಮಡಲದ ಅಧ್ಯಕ್ಷ ಎಚ್ ವಿ ಗೌತಮ್ ಕಾರ್ಯದರ್ಶಿ ಕೆ ರಾಮಚಂದ್ರ ಉಪಾಧ್ಯಾಯ ಇವರುಗಳಿಗೆ ಶ್ರೀ ರಾಮವಿಠಲಾನುಗ್ರಹ ಪ್ರಶಸ್ತಿಯನ್ನು ಶ್ರೀಗಳು ಪ್ರದಾನಿಸಿ ಆಶೀರ್ವದಿಸಿದರು.
ಸಮ್ಮೇಳನಾಧ್ಯಕ್ಷರುಗಳಾದ ವಿದ್ವಾನ್ ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ, ಉದ್ಯಮಿ ಕೆ ರಾಮಪ್ರಸಾದ ಭಟ್ ಚೆನ್ನೈ, ವಿದ್ವಾನ್ ಪೆರಣಂಕಿಲ ಹರಿದಾಸ ಭಟ್ಟರನ್ನೂ ಶ್ರೀಗಳು ವಿಶೇಷವಾಗಿ ಸಂಮಾನಿಸಿದರು. ಸಮ್ಮೇಳನಸ್ವಾಗತ ಸಮಿತಿ ಪ್ರ. ಕಾರ್ಯದರ್ಶಿ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯರನ್ನೂ ಸತ್ಕರಿಸಲಾಯಿತು.
ಹೈಕೂರ್ಟ್ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ, ಆರ್ ದೇವದಾಸ್, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಶಾಸಕರಾದ ಗುರ್ಮ ಸುರೇಶ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ ಸತ್ಯನಾರಾಯಣ ಆಚಾರ್ಯ, ಯಶ್ಪಾಲ್ ಎ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಕೆ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಶ್ರೀಕೃಷ್ಣಮಠದ ದಿವಾನರಾದ ಎಂ ನಾಗರಾಜ ಆಚಾರ್ಯ, ಸಾಮಾಜಿಕ ಧುರೀಣರಾದ ಹರಿಕೃಷ್ಣ ಪುನರೂರು, ಪ್ರೊ ವಾದಿರಾಜ್ ಗೋಪಾಡಿ, ಕೊಡಿಬೆಟ್ಟು ಗ್ರಾ ಪಂ ಅಧ್ಯಕ್ಷ ಸಂದೀಪ್ ಮಡಿವಾಳ ಶ್ರೀಪಾದ ಸಿಂಗನಮಲ್ಲಿ ಪ್ರದೀಪ ಕಲ್ಕೂರ ಮೊದಲಾದವರು ಮೂರೂ ದಿನಗಳ ಧರ್ಮಸಭೆಗಳಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ವಿದ್ವಾನ್ ನಂದಳಿಕೆ ವಿಠಲ ಭಟ್, ಪೊಸ್ರಾಲು ಬಾಲಕೃಷ್ಣ ಭಟ್, ಡಾ ಆನಂದ ತೀರ್ಥ ಉಪಾಧ್ಯಾಯ ಸಗ್ರಿ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ವಿದ್ವಾನ್ ಸಗ್ರಿ ಅನಂತ ಸಾಮಗ, ವಿ. ಶಶಾಂಕ ಭಟ್, ಪೆರಂಪಳ್ಳಿ ವಾಸುದೇವ ಭಟ್ ಪಿ ಶ್ರೀಶ ನಾಯಕ್, ಕೆ. ವಿಷ್ಣುಮೂರ್ತಿ ಆಚಾರ್ಯ, ವಿದ್ವಾನ್ ಗೋಪಾಲ ಜೋಯಿಸ್ ಮೊದಲಾದವರು ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ