ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಮನೆಯೇ ಗ್ರಂಥಾಲಯ ಅಭಿಯಾನ ಹಿರಿಯ ನಾಗರಿಕ ವೇದಿಕೆ ಕಚೇರಿಯಲ್ಲಿ ಎ.22ರಂದು ಮಂಗಳವಾರ ಅನುಷ್ಠಾನ ಗೊಳಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪಿ ನಾಗರಾಜರಾವ್ ಪುಸ್ತಕ ನಮ್ಮ ಅತ್ಯುತ್ತಮ ಮಿತ್ರ. ಪುಸ್ತಕಗಳನ್ನು ಓದುವುದರಿಂದ ನಮ್ಮ ಸಮಯವನ್ನು ಕ್ರಿಯಾಶೀಲವಾಗಿ ಕಳೆಯಬಹುದಾಗಿದೆ ಅಲ್ಲದೆ, ಸಾಕಷ್ಟು ಜ್ಞಾನ ಸಂಪಾದನೆ ಮಾಡಬಹುದು. ಈ ನಿಟ್ಟಿನಲ್ಲಿ ಕಸಾಪ ಉಡುಪಿ ತಾಲೂಕಿನ ಕಾಯ೯ ಅಭಿನಂದನೀಯ ಎಂದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಹಿರಿಯ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ,ಉಪಾಧ್ಯಕ್ಷ ಕೆ.ಮುರಳೀಧರ, ಕಾರ್ಯದರ್ಶಿ ನಂದಕುಮಾರ್, ಕೋಶಾಧಿಕಾರಿ ಉಮೇಶ್ ರಾವ್, ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಹೆಚ್.ವಿಶ್ವನಾಥ್ ಹೆಗ್ಡೆ. ಹಿರಿಯ ಸದಸ್ಯ ಸಿ.ಯಸ್.ರಾವ್. ಮತ್ತು ಆಡಳಿತ ಸಮಿತಿಯ ಸದಸ್ಯರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ