ಶಿವಮೊಗ್ಗ: ಇಲ್ಲಿನ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಈಗಾಗಲೇ ಮೂರು ವರ್ಷಗಳ ಬಿ.ಸಿ.ಎ. ಪದವಿಯನ್ನು ಪ್ರಾರಂಭಿಸಲಾಗಿದ್ದು, ಮೊದಲ ಬ್ಯಾಚ್‌ನ ಬಿ.ಸಿ.ಎ. ವಿದ್ಯಾರ್ಥಿಗಳು ಅವರ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಸಿ.ಎ. ಮೊದಲ ಬ್ಯಾಚ್‌ನ ಮೊಹಮ್ಮದ್ ಜಬೀ ಹಾಗೂ ಅಭಿಷೇಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್‌ಫರ್‌ಮೇಟಿಕ್ಸ್ ಡಿಜಿಟಲ್ ಸೊಲ್ಯುಷನ್ ಎಂಬ ಕಂಪನಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ಆಗಿರುವ ಅನಮೋಲ್ ತಿಳಿಸಿದ್ದಾರೆ.
ಹೈದರಾಬಾದ್‌ನ ಈ ಕಂಪನಿಯು ನಡೆಸಿದ ಮೂರು ಹಂತಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಯಶಸ್ವಿಯಾಗಿ ತಮ್ಮ ಆಯ್ಕೆ ಆದೇಶವನ್ನು ಇದೀಗ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ. ಶಿವಮೊಗ್ಗದಲ್ಲಿ ಈ ಶೈಕ್ಷಣಿಕ ಅವಧಿಯಲ್ಲಿ ಮೊತ್ತಮೊದಲ ಬಾರಿಗೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಿ.ಸಿ.ಎ. ವಿದ್ಯಾರ್ಥಿಗಳು Fullstack (MERN) ಎಂಬ ಅಭಿವೃದ್ಧಿಪೂರಕ (Developer) ಹುದ್ದೆಗೆ ಆಯ್ಕೆಯಾಗಿರುತ್ತಾರೆ. ಇದು ಒಂದು ಅತ್ಯುತ್ತಮ ಸಾಧನೆ ಎಂದು ಅನ್‌ಮೋಲ್ ತಿಳಿಸಿದರು.
ಕಾಲೇಜ್‌ನ “ದಿಶಾ ಕೆರಿಯರ್ ಗೈಡೆನ್ಸ್” ಮೂಲಕ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಪೂರ್ವತಯಾರಿ ತರಬೇತಿಗಳನ್ನು ನಡೆಸಲಾಗಿತ್ತು. ನಂತರದಲ್ಲಿ ಇಂಟರ್ನೆಶಿಪ್ ಹಾಗೂ ಔದ್ಯೋಗಿಕ ಆಯ್ಕೆ ಸಂದರ್ಶನಗಳಿಗೆ ವಿದ್ಯಾರ್ಥಿಗಳನ್ನು ಒಳಪಡಿಸಲಾಯಿತು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಯವರು, ವಿದ್ಯಾರ್ಥಿಗಳನ್ನು ವೃತ್ತಿಪರ ಹಾಗೂ ಸಮಾಜ ಮುಖಿಯಾಗಿ ಬೆಳೆಸುವುದೇ ಈ ಕಾಲೇಜಿನ ಗುರಿ. ಇದಕ್ಕೆ ಪೂರಕವಾದ ತರಬೇತಿಗಳನ್ನು ಹಾಗೂ ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳನ್ನು ಈ ಕಾಲೇಜು ಒದಗಿಸುತ್ತದೆ. ಕಾಲೇಜಿನ ಬಿ.ಸಿ.ಎ.ವಿಭಾಗವು ಇದಕ್ಕಾಗಿ ಉತ್ತಮ ಉಪನ್ಯಾಸಕರನ್ನೂ ಒಳ್ಳೆಯ ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯವನ್ನು ಹೊಂದಿದೆ. ಇದೆಲ್ಲದರ ಕಾರಣದಿಂದ ಈ ಇಬ್ಬರು ವಿದ್ಯಾರ್ಥಿಗಳಾದ ಶ್ರೀ ಮೊಹಮ್ಮದ್ ಜಬೀ ಹಾಗೂ ಶ್ರೀ ಅಭಿಷೇಕ್ ಅತ್ಯಂತ ಹೆಚ್ಚಿನ ಶ್ರಮವಹಿಸಿ ಔದ್ಯೋಗಿಕ ಸಂದರ್ಶನದಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಉದ್ಯೋಗದ ಆದೇಶ ಈಗಾಗಲೇ ದೊರಕಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಶಿವಮೊಗ್ಗದಲ್ಲೇ ಪ್ರಥಮಬಾರಿಗೆ ಬಿ.ಸಿ.ಎ. ಪದವಿ ಹಂತದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಮೂಲಕ ಕ್ಯಾಂಪಸ್ ಸೆಲೆಕ್ಷನ್ ಆಗಿರುವುದು ಹೆಮ್ಮೆಯ ವಿಷಯ. ಎಂದು ಹೇಳಿದರು. ಅನ್‌ಮೋಲ್, ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀ ಹಾಗೂ ಅಭಿಷೇಕ್ ರವರನ್ನು ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರಾದ ಮಂಗೇಶ್ ಪೈ ಅಭಿನಂದಿಸಿದರು.
ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ.ರಜನಿ ಎ ಪೈ , ‘ನಮ್ಮ ಸಂಸ್ಥೆಗೆ ಇದು ಶ್ಲಾಘನೀಯ ಮಜಲು. ಈಗಾಗಲೇ ಸೈಕಾಲಜಿ ಸ್ನಾತಕೋತ್ತರ ವಿದ್ಯಾರ್ಥಿಗಳೆಲ್ಲರೂ ತಮ್ಮ ಅಂತಿಮ ಸೆಮಿಸ್ಟರ್‌ನಲ್ಲೇ ಉದ್ಯೋಗದ ಆದೇಶ ಪಡೆಯುತ್ತಿದ್ದಾರೆ. ಇದೀಗ ಬಿ.ಸಿ.ಎ ವಿದ್ಯಾರ್ಥಿ ಗಳಿಗೂ ಕಾಲೇಜು ಕ್ಯಾಂಪಸ್ ಸೆಲೆಕ್ಷನ್‌ಗೆ ಅವಕಾಶ ಮಾಡಿರುವುದು ಸಂತಸ ತಂದಿದೆ’. ಇಬ್ಬರೂ ವಿದ್ಯಾರ್ಥಿಗಳಿಗೆ ಹಾಗೂ ಪ್ಲೇಸ್‌ಮೆಂಟ್ ಆಫೀಸರ್‌ಗೆ, ಉಪನ್ಯಾಸಕರೆಲ್ಲರಿಗೆ ಅವರು, ಟ್ರಸ್ಟ್ ಪರವಾಗಿ ಅಭಿನಂದಿಸಿದರು. ಡಾ. ರಾಜೇಂದ್ರ ಚೆನ್ನಿ, ಪ್ರೊ. ರಾಮಚಂದ್ರ ಬಾಳಿಗ ರವರು ಈ ಸಾಧನೆಯು ರ‍್ಯಾಂಕ್ ಬಂದಷ್ಟೆ ಹರ್ಷ ತಂದಿದೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀ ಹಾಗೂ ಅಭಿಷೇಕ್ ಮತ್ತು ಅವರಿಗೆ ತರಬೇತಿ ನೀಡಿದ ಅನಮೋಲ್,ವಿಭಾಗದ ಮುಖ್ಯಸ್ಥ ಮಂಗೇಶ್ ಪೈ ಮತ್ತು ಉಪನ್ಯಾಸಕ ರಿಗೆ ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಈ ಕಾಲೇಜು ಉತ್ತಮ ವಾತಾವರಣ ಕಲ್ಪಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅಭಿ ಪ್ರಾಯಪಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ