ಅಕ್ಷಯ ತೃತೀಯದಂದು ಚಿನ್ನಾಭರಣ ವಾಹನ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದರೆ. ಅದೃಷ್ಟ ದೊರೆಯುತ್ತದೆ. ಮತ್ತಷ್ಟು ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಗ ಬರುತ್ತದೆ. ಈ ದಿನದಂದು ಯಾವುದೇ ಶುಭ ಕಾರ್ಯಕ್ರಮ ಆರಂಭಿಸಿದರೂ ಅದರಲ್ಲಿ ಸಂಪೂರ್ಣ ಯಶಸ್ಸು ಸಿಗುತ್ತದೆ ಎಂದು ಜನರು ನಂಬುತ್ತಾರೆ. ಈ ದಿನ ಪೂಜೆ ಪುನಸ್ಕಾರಗಳು ವೃತದಾನ, ಧರ್ಮ ಮಾಡಿದರೆ ಪುಣ್ಯಲಭಿಸುತ್ತದೆ. ಅಕ್ಕ-ಪಕ್ಕದ ಮನೆಯವರಿಗೆ ಅರಿಶಿನ, ಕುಂಕಮ ತಾಂಬೂಲ ಕೊಡುತ್ತಾರೆ. ಗೋವಿಗೆ ಪೂಜೆ ಮಾಡಿ ಬಾಳೆ ಎಲೆಯಲ್ಲಿ ಸಿಹಿ ತಿನಿಸಿದರೆ ವಿವಾಹ ದೋಷಗಳು ಪರಿಹಾರವಾಗುವುದಾಗಿ ನಂಬಿಕೆ ಇದೆ. ಹೀಗಾಗಿ ದಾನ ಧರ್ಮ ನೀಡುವ ಮೂಲಕ ಈ ಅಕ್ಷಯ ತೃತೀಯ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ.
ಆಭರಣ ಕೊಳ್ಳುವಾಗ ಶೋರೂಮ್ ನಲ್ಲಿ ಹಾಲ್ ಮಾರ್ಕ್ ಇರುವ ಚಿನ್ನವನ್ನೇ ಖರೀದಿಸಿ, ಒಡವೆ ತೂಕದ ಎಲೆಕ್ಟ್ರಾನಿಕ್ ಯಂತ್ರದ ಬಗ್ಗೆ ನಿಗಾ ವಹಿಸಿ .
- ವಿ.ಎಂ.ಎಸ್.ಗೋಪಿ, ಬೆಂಗಳೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ