ಕಲಾ ವಿಭಾಗದಲ್ಲಿ ಸಾಗರದಷ್ಟು ಅವಕಾಶವಿದೆ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

Upayuktha
0



ಪುತ್ತೂರು: ಅಂಕಪಟ್ಟಿಯ ಅಂಕಗಳಿಗಿಂತ ನಮ್ಮ ಕೌಶಲ್ಯ ಜೀವನಕ್ಕೆ ಅಗತ್ಯ. ಹೆಚ್ಚಿನ ಕೌಶಲ್ಯವನ್ನು ಅಭ್ಯಸಿಸಿದಷ್ಟು ನಮ್ಮ ಪದವಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಪದವಿಯ ಜೊತೆ ಜೊತೆಗೆ ಬೇರೆ ಬೇರೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು  ಮಾಡುವುದರಿಂದ ಕೆಲಸವನ್ನು ಪಡೆಯಲು ಸುಲಭವಾಗುತ್ತದೆ. ಅದೇ ರೀತಿ ವಿದೇಶಿ ಭಾಷೆಗಳನ್ನು ಕಲಿಯುವುದರಿಂದ ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಸಹಕಾರಿ. ಆನ್‌ಲೈನ್ ಕೋರ್ಸ್‌ಗಳು  ಕೆಲಸವನ್ನು ಪಡೆಯಲು ಇರುವ ಸುಲಭೋಪಾಯ. ನಮ್ಮ ವೃತ್ತಿಜೀವನಕ್ಕೆ ಉಪಯೋಗವಾಗುವ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇದರ  ನಿವೃತ್ತ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ತರಬೇತಿ ಹಾಗೂ ಉದ್ಯೋಗ ಘಟಕ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ “ಹೈಯರ್ ಎಜುಕೇಶನ್ ರೋಡ್‌ಮ್ಯಾಪ್- ಚೂಸಿಂಗ್ ದ ರೈಟ್ ಪಾಥ್” ಎಂಬ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಇವರು, ಪದವಿಯ ನಂತರ ನಮ್ಮಲ್ಲಿ ಹಲವಾರು ರೀತಿಯ ಗೊಂದಲಗಳು ಸೃಷ್ಟಿ ಯಾಗುತ್ತದೆ. ಕೆಲಸಕ್ಕೆ ತೆರಳುವುದು, ಉನ್ನತ ವ್ಯಾಸಂಗ ಮಾಡುವುದು ಹೀಗೆ ಪ್ರಶ್ನೆಗಳು ಮೂಡುತ್ತವೆ. ಉನ್ನತ ವ್ಯಾಸಂಗಕ್ಕೆ ನಮ್ಮೆದುರಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಸರಿಯಾಗಿ ಗುರುತಿಸಿ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.


ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್, ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ನಾತಕೋತ್ತರ ರಸಾಯನಶಾಸ್ತç ವಿಭಾಗದ ಉಪನ್ಯಾಸಕಿ ಡಾ. ಸ್ಮಿತಾ.ಕೆ. ರೈ ನಿರೂಪಿಸಿ, ಸಮಾಜಶಾಸ್ತç ವಿಭಾಗದ ಉಪನ್ಯಾಸಕಿ ಜ್ಯೋತಿ ಎಡಪಡಿತ್ತಾಯ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top