ಭೂಮಿಯೇ ನಮ್ಮ ಮನೆ

Chandrashekhara Kulamarva
0



ನಾವು ಇರುವ ನೆಲವೇ ಭೂಮಿ. ಈ ಭೂಮಿಯನ್ನು ನಮ್ಮ ತವರು ಮನೆ ಎಂದು ಕರೆಯಲಾಗುತ್ತದೆ. ಭೂಮಿಯು ಸೌರಮಂಡಲದ ಮೂರನೇ ಗ್ರಹವಾಗಿದೆ. ಇದನ್ನು ನೀಲಿ ಗ್ರಹವೆಂದು ಕರೆಯಲಾಗುತ್ತದೆ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ತುಂಬಿಕೊಂಡಿದೆ. ಉಳಿದ ಕಾಲು ಭಾಗದಲ್ಲಿ ಜನ ವಾಸ ಮಾಡುವ ಗಟ್ಟಿ ನೆಲವಿದೆ. ಭೂಮಿಯ ಮೇಲೆ ನದಿ, ಕೆರೆ ಹಳ್ಳ- ಕೊಳ್ಳಗಳು ಇವೆ. ಇವುಗಳಲ್ಲಿ ಹರಿಯುವ  ನೀರು ಸಮುದ್ರ ಮತ್ತು ಸಾಗರಗಳನ್ನು ಸೇರುತ್ತವೆ. ಇಲ್ಲಿ ಬೆಟ್ಟ-ಗುಡ್ಡ , ಕಾಡು - ಕಣಿವೆಗಳಿವೆ. ಇಲ್ಲಿ ಕಾಡು ಪ್ರಾಣಿಗಳಾದ ವಿವಿಧ ಜಾತಿಯ ಜೀವ ಜಂತುಗಳು ವಾಸ ಮಾಡುತ್ತವೆ. ಜನ ವಾಸಿಸುವ ನೆಲವಿದೆ. ಭೂಮಿಯು ಖಂಡಗಳಾಗಿ ತುಂಡರಿಸಿಕೊಂಡಿದೆ. ಒಟ್ಟು ಏಳು ಖಂಡಗಳಿವೆ. ಅವೆಂದರೆ ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ ಅಂಟಾರ್ಟಿಕಾ ಖಂಡಗಳಿವೆ.


ಭೂಮಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಭೂಮಿ, ಭುವಿ, ಪೃಥ್ವಿ, ಧರೆ, ವಸುಂಧರೆ, ಇಳೆ, ವಸುಧೆ, ಧಾತ್ರಿ , ಧರಿತ್ರಿ, ನೆಲ ಹೀಗೆ ಹಲವಾರು ಹೆಸರುಗಳಿವೆ. ಭೂಮಿಯನ್ನು ತಾಯಿಗೆ ಹೋಲಿಸಲಾಗುತ್ತದೆ. ಆದ್ದರಿಂದಲೇ ಭೂಮಿತಾಯಿ, ಭೂತಾಯಿ, ಭೂಮಾತೆ ಎಂದೆಲ್ಲಾ ಹೇಳಲಾಗುತ್ತದೆ. ಈ ಭೂಮಿಯಲ್ಲಿ ನಾವು ವಾಸ ಮಾಡಲು ಅಗತ್ಯವಾಗಿ ಬೇಕಾದ ನೀರು, ಗಾಳಿ, ಶಾಖ, ಆಹಾರ ಎಲ್ಲವೂ ಇವೆ. 


ನಮ್ಮ ಭೂಮಿ ಹಸಿರಿನಿಂದ ಕೂಡಿದೆ. ಈ ಹಸಿರು ಕಾಡುಗಳು ಭೂಮಿಗೆ ಮಳೆಯನ್ನು ತರುತ್ತವೆ. ಮಳೆ ಇದ್ದರೆ ಬೆಳೆ ಇಲ್ಲದಿದ್ದರೆ ಏನು ಇಲ್ಲ. ಬೆಳೆ ಬೆಳೆದು ನಾವು ಆಹಾರವಾಗಿ ತಿಂದು ಬದುಕುತ್ತೇವೆ. ಆದ್ದರಿಂದ ಮಳೆಯು ಭೂಮಿಗೆ ಅತಿ ಮುಖ್ಯವಾಗಿದೆ. ಈಗೀಗ ಮಳೆ ಕಡಿಮೆ ಆಗುತ್ತಿದೆ. ಯಾಕೆಂದರೆ ಮಳೆ ಕಾಡುಗಳು ಕಡಿಮೆಯಾಗಿವೆ ಎಂದು ಟಿವಿ, ರೇಡಿಯೋ ಮತ್ತು ನ್ಯೂಸ್ ಪೇಪರ್ ಗಳ ಮೂಲಕ ನಮಗೆ ತಿಳಿದು ಬರುತ್ತಿದೆ. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ನಿಂದ ಭೂಮಿ ಮಾಲಿನ್ಯವಾಗುತ್ತಿದೆ. ಭೂಮಿಯಲ್ಲಿ ಸೆಕೆ ಜಾಸ್ತಿಯಾಗುತ್ತಿದೆ. ಭವಿಷ್ಯ ಕಷ್ಟವಾಗುತ್ತದೆ. ಆದ್ದರಿಂದ ನಾವು ಭೂಮಿಯನ್ನು ಕಾಪಾಡಬೇಕು. ಭೂಮಿಯನ್ನು ಸದಾ ಹಸಿರಾಗಿಡಬೇಕು. ಅದಕ್ಕಾಗಿ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸೋಣ.


-ಸಿರಿ .ವಿ.ಸಿ

ಮೂರನೇ ತರಗತಿ

ಕೇಂದ್ರೀಯ ವಿದ್ಯಾಲಯ, ಹಾಸನ,

                                                         



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
To Top