ಪಾಕಿಸ್ತಾನ ನಾಶವಾದರೆ ಮಾತ್ರ ಭಯೋತ್ಪಾದನೆ ನಿರ್ನಾಮ: ಡಾ.ಪ್ರಭಾಕರ ಭಟ್ ಕಲ್ಲಡ್ಕ

Upayuktha
0



ಬಂಟ್ವಾಳ: ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು ಅದರ ನಿರ್ಮೂಲನವಾಗಬೇಕಾದರೆ ಭಯೋತ್ಪಾದಕರನ್ನು ಸೃಷ್ಟಿಸುವ ಪಾಕಿಸ್ಥಾನದ ನಾಶವಾದರೆ ಮಾತ್ರ ಸಾಧ್ಯ ವಾದೀತು ಎಂದು ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ಕಲ್ಲಡ್ಕದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಡೆದ ಹಿಂದುಗಳ ಹತ್ಯೆಯ ವಿರುದ್ಧ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ   ಮಾತನಾಡಿದರು.


ಹಿಂದುಗಳ ಮೇಲೆ ಹಲವು ಶತಮಾನಗಳಿಂದಲೂ ಮುಸಲ್ಮಾನರಿಂದ ಹಲವು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ. ಸಮಾಜ ಎಲ್ಲವನ್ನೂ ಸಹಿಸಿಕೊಂಡು ಬಂದಿದೆ. ಸಾಮರಸ್ಯಕ್ಕೆ ಪ್ರಯತ್ನಿಸಿದೆ. ಆದರೆ ಹಿಂದುಗಳನ್ನು ನಾಶ ಮಾಡುವ ಷಡ್ಯಂತ್ರ ನಿರಂತರ ಆಗುತ್ತಲೇ ಇದೆ. ಹಿಂದೂ ಎಂದೂ ಅನ್ಯ ಮತೀಯರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳೇ ಇಲ್ಲ. ಆದರೂ ಹಿಂದುಗಳನ್ನು ದ್ವೇಷಿಸುವ ಹಾಗೂ ದೂಷಿಸುವ ಸರಕಾರ ಹಿಂದುಳಿಗೆ ರಕ್ಷಣೆ ನೀಡುತ್ತಿಲ್ಲ. ಮುಸಲ್ಮಾನರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರು. ಭಯೋತ್ಪಾದರಿಗೆ ರಕ್ಷಣೆ ನೀಡುತ್ತಿದೆ ಎಂದರು.


ಸಂಘದ ನೂರು ವರ್ಷಗಳ ಶ್ರಮದ ಫಲವಾಗಿ ಹಿಂದು ಸಮಾಜ ಇಂದು ಜಾಗೃತವಾಗಿದೆ. ಈಗ ಭಯೋತ್ಪಾದಕರನ್ನು ಎದುರಿಸಲು ಸಜ್ಜಾಗಿದೆ, ಜಾಗೃತವಾಗಿದೆ ಎಂದು ಗುಡುಗಿದರು.


ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿದರು. ಭಾರತದೊಳಗಿರುವ ಭಯೋತ್ಪಾದಕರನ್ನು ಮಟ್ಟ ಹಾಕುವುದಕ್ಕೆ ಹಿಂದೂ ಸಮಾಜ ಸನ್ನದ್ದವಾಗ ಬೇಕಾಗಿದೆ. ಭಯೋತ್ಪಾದಕರಿಗೆ ಬೆಂಬಲ ನೀಡುವ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಇದಕ್ಕೆ ಹಿಂದುಗಳು ಎಲ್ಲಾ ಭೇದಗಳನ್ನು ಬದಿಗಿಟ್ಟು ಒಗ್ಗಟ್ಟಾಗಬೇಕಾಗಿದೆ. ಸಂಘಟಿತ ಶಕ್ತಿಯಿಂದ ಮಾತ್ರ ದುಷ್ಟರನ್ನು ನಿಗ್ರಹಿಸಲು ಸಾಧ್ಯ ಎಂದರು.


ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮಹಾಬಲ ರೈ ಬೋಳಂತೂರು, ಜಿನರಾಜ ಕೋಟ್ಯಾನ್, ಲಖಿತಾ ಆರ್ .ಶೆಟ್ಟಿ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಸುಲೋಚನಾ ಜಿಕೆ ಭಟ್, ನಾಗೇಶ್ ಕಲ್ಲಡ್ಕ, ಸುಜಿತ್ ಕಲ್ಲಡ್ಕ, ಕ.ಕೃಷ್ಣಪ್ಪ ಸೇರಿದಂತೆ ಬಿಜೆಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ, ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಿದ್ದರು.


ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ, ಭಜರಂಗ ದಳದ ಗೋಪಾಲ್ ನಿರೂಪಿಸಿ, ವಿದ್ಯಾರ್ಥಿ ಪರಿಷತ್ತಿನ ಸ್ವಾತಿ ಲಕ್ಷ್ಮೀ ವಂದಿಸಿದರು. ಮಧ್ಯಾಹ್ನ ಮೂರು ಗಂಟೆಯಿಂದ ಅಂಗಡಿ, ಹೊಟೇಲು ಹಾಗೂ ಇತರ ವ್ಯವಹಾರಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top