ಚೆನ್ನೈ: ತಮಿಳುನಾಡು ಸರ್ಕಾರವು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ದೇಶದಲ್ಲೇ ಇದು ಮೊದಲ ಕ್ರಮವಾಗಿದ್ದು, ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ತಮಿಳುನಾಡು ವಿಧಾನಸಭೆಯು 2020ರ ಜನವರಿಯಿಂದ 2023ರ ಏಪ್ರಿಲ್‌ವರೆಗೆ 12 ಮಸೂದೆ ಅಂಗೀಕರಿಸಿತ್ತು. ಈ ಮಸೂದೆಗಳು ರಾಜ್ಯದ ವಿಶ್ವವಿದ್ಯಾಲಯಗಳ ಆಡಳಿತವನ್ನು ಗವರ್ನರ್‌ರಿಂದ ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಗುರಿಯನ್ನು ಹೊಂದಿದ್ದವು. ಗವರ್ನರ್ ಆರ್.ಎನ್.ರವಿ ಈ ಮಸೂದೆಗಳಿಗೆ ಸಮ್ಮತಿ ನೀಡದೆ ಮೂರು ವರ್ಷಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿ 2023ರ ನವೆಂಬರ್‌ನಲ್ಲಿ ಗವರ್ನರ್ 10 ಮಸೂದೆಗಳಿಗೆ ಸಮ್ಮತಿ ನಿರಾಕರಿಸಿದರು. ಎರಡನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದರು. ರಾಜ್ಯ ವಿಧಾನಸಭೆಯು ಈ 10 ಮಸೂದೆಗಳನ್ನು ವಿಶೇಷ ಅಧಿವೇಶನದಲ್ಲಿ ಮತ್ತೆ ಅಂಗೀಕರಿಸಿ ಗವರ್ನರ್‌ಗೆ ಕಳುಹಿಸಿದರೂ ಅವುಗಳನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು. ರಾಷ್ಟ್ರಪತಿಗಳು ಒಂದು ಮಸೂದೆಗೆ ಸಮ್ಮತಿ ನೀಡಿದರು, ಏಳನ್ನು ತಿರಸ್ಕರಿಸಿದರು ಮತ್ತು ಎರಡನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.
ಈ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠವು, ಗವರ್ನರ್ ಆರ್.ಎನ್. ರವಿ ಅವರ ಕ್ರಮವನ್ನು ಕಾನೂನುಬಾಹಿರ ಮತ್ತು ತಪ್ಪು ಎಂದು ಘೋಷಿಸಿದೆ.
ರಾಜ್ಯಪಾಲರಿಗೆ ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರವಿಲ್ಲ. ಸಂವಿಧಾನದಲ್ಲಿ ಇಂತಹ ಆಯ್ಕೆಯನ್ನು ಒದಗಿಸಲಾಗಿಲ್ಲ ಎನ್ನುವ ಮೂಲಕ ರಾಜ್ಯಪಾಲರ ಕಾರ್ಯವಿಧಾನಕ್ಕೆ ಸಮಯ ಮಿತಿ ವಿಧಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ