ಸುರತ್ಕಲ್: ಆಧುನಿಕ ತಂತ್ರಜ್ಞಾನಗಳು ಉಪಯೋಗದಷ್ಟೇ ಅಪಾಯಗಳನ್ನೂ ತಂದೊಡ್ಡುವ ಸಂಭವಗಳಿವೆ. ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಗಾಗಿ ಮಾತ್ರ ಮೊಬೈಲ್ ಬಳಕೆಯನ್ನು ಸೀಮಿತಗೊಳಿಸಬೇಕು. ಕೃತಕ ಬುದ್ದಿಮತ್ತೆಯು ಎಲ್ಲಾ ಕ್ಷೇತ್ರಗಳನ್ನು ಸರ್ವವ್ಯಾಪಿಯಾಗಿ ವ್ಯಾಪಿಸುತ್ತಿದ್ದು ವಿದ್ಯಾರ್ಥಿಗಳು ಉನ್ನತ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾಭ್ಯಾಸದೊಂದಿಗೆ ಜೀವನ ಮೌಲ್ಯಗಳನ್ನು ಅರಿತುಕೊಂಡರೆ ಮುಂದಿನ ಬದುಕಿನಲ್ಲಿ ಬರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಆಕಾಶವಾಣಿ ಮಂಗಳೂರಿನ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಪಿ.ಎಸ್, ನುಡಿದರು.
ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ)ದ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಮತ್ತು ವಿದ್ಯಾರ್ಥಿ ಸೆನೆಟ್‌ನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ, ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿರುವುದು ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರಕಷ್ಟೇ ವಿದ್ಯಾರ್ಥಿಗಳು ಸೀಮಿತವಾಗಿರದೆ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಸ್ವಾಗತಿಸಿದರು. ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಸತತವಾಗಿ ನೀಡುತ್ತಿರುವ ಪೇಜಾವರ ರಾಧಾ ದಯಾನಂದ ರಾವ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ರಾಧಾ ರಾವ್ ಅವರನ್ನು ಸನ್ಮಾನಿಸಲಾಯಿತು.
ಪಿ.ಹೆಚ್‌ಡಿ. ಪದವಿ ಪಡೆದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಶಾಸ್ತ್ರದ ಉಪನ್ಯಾಸಕರಾದ ಡಾ. ಶ್ರೀದೇವಿ ಮತ್ತು ಡಾ. ಪ್ರತೀಕ್ಷಾ ಮತ್ತು ವಿಶ್ವವಿದ್ಯಾನಿಲಯದ ಪರೀಕ್ಷೇಗಳಲ್ಲಿ ರ‍್ಯಾಂಕ್ ಪಡೆದ ಮೇಘಾ ಶೆಟ್ಟಿ ಹಾಗೂ ನವ್ಯ ಪ್ರಭು ಅವರನ್ನು ಅಭಿನಂದಿಸಲಾಯಿತು.
ಅಮ್ಯಿಟಿ ವಿಶ್ವವಿದ್ಯಾನಿಲಯ ನೋಯಾ,್ಡ ಉತ್ತರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟಗಳ 38ನೇ ಅಂತರ್ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರಹಸನ ಸ್ಪರ್ಧೆಯಲ್ಲಿ ಎರಡನೇ ರಾಷ್ಟ್ರೀಯ ಪ್ರಶಸ್ತಿ ಪಡೆದ ತಂಡದ ಸದಸ್ಯರನ್ನು ಮತ್ತು ವೈಯಕ್ತಿಕ ಸಂಗೀತ ಸ್ಪರ್ಧೆ ವಿಭಾಗದಲ್ಲಿ ಮೂರನೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಹಿಮಾಂಗಿ ಡಿ ಉಳ್ಳಾಲ್‌ರನ್ನು ಸನ್ಮಾನಿಸಲಾಯಿತು.
ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ. ದಾನಿಗಳ ಪಟ್ಟಿಯನ್ನು ಓದಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ವಿಶೇಷ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಪ್ರಾಧ್ಯಾಪಕಿಯರಾದ ಡಾ. ವಿಜಯಲಕ್ಷ್ಮೀ ಮತ್ತು ಡಾ. ಆಶಾಲತಾ ಮತ್ತು ಡಾ. ಸುಜಾತ ಬಿ. ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಡಾ. ಭಾಗ್ಯಲಕ್ಷ್ಮೀಎಂ., ಡಾ ಆಶಾ, ಡಾ. ಪ್ರಶಾಂತ್ ಎಂ.ಡಿ. ಕ್ಯಾ. ಡಾ. ಸುಧಾ ಯು, ಗೀತಾ ಕೆ., ಹರ್ಷರಾಣಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ವಾಚಿಸಿದರು.
ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಜನ್ಯ ವಂದಿಸಿದರು. ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳಾದ ಧನ್ವಿನ್, ಯಶಸ್ ಕೆ. ಬಂಗೇರ, ಜಿತಿನ್ ಜೆ. ಶೆಟ್ಟಿ, ತುಷಾರ್, ಗಗನ್ ಎನ್. ಶೆಟ್ಟಿ ಉಪಕಾರ್ಯದರ್ಶಿಗಳಾದ ಸ್ವಾತಿ, ವೇದಿಕಾ, ಪ್ರತೀಕ್ಷಾ ಎ. ಭಟ್, ಶಿವಾನಿ ಮತ್ತು ವಿವಿಧ ಸಂಘಗಳ ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ