ಸುರತ್ಕಲ್: ಸೃಜನಶೀಲ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕಾರ್ಯಾಗಾರ

Upayuktha
0



ಸುರತ್ಕಲ್: ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ಸೃಜನಾತ್ಮಕವಾಗಿ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ನವೀನ ಮತ್ತು ಪರಿಣಾಮಕಾರಿ ಯಾದ ಪರಿಹಾರಗಳು ಲಭಿಸುತ್ತದೆ. ವೇಗವಾಗಿ ಅಭಿವೃದ್ಧಿಗೊಳ್ಳು ತ್ತಿರುವ ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣವು  ಬಹುಮುಖ್ಯ ಅಗತ್ಯಗಳಲ್ಲಿ ಒಂದಾಗಿದ್ದು ವಿದ್ಯಾರ್ಥಿಗಳ ಬಹುಮುಖ ಸಾಮರ್ಥ್ಯಗಳನ್ನು ವೃದ್ಧಿಸುವತ್ತ ಶಿಕ್ಷಣ ಸಂಸ್ಥೆಗಳು ಗಮನಹರಿಸುವುದು ಮುಖ್ಯ ಎಂದು ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಂಸ್ಥೆ, ಸುರತ್ಕಲ್ (ವಿರಾಟ್), ಟ್ರಸ್ಟಿ ವೈ ರಾಘವೇಂದ್ರ ರಾವ್ ನುಡಿದರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗಗಳು ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಂಸ್ಥೆ, ಸುರತ್ಕಲ್ (ವಿರಾಟ್)ನ ಪಾಯೋಜಕತ್ವದಲ್ಲ್ರಿ  ಆಯೋಜಿಸುತ್ತಿರುವ ಉದ್ಯೋಗ ಕೌಶಲ್ಯಗಳು –ಕಾರ್ಯಾಗಾರ ಸರಣಿಯ ಸೃಜನಶೀಲ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ,  ಕಾಲೇಜಿನ ಸ್ನಾತಕೋತ್ತರ ಅದ್ಯಯನ ವಿಭಾಗಗಳು ನಿರಂತರವಾಗಿ ವಿಶಿಷ್ಟ ಕಾರ್ಯಗಾರಗಳನ್ನು ಆಯೋಜಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಔದ್ಯೋಗಿಕ ರಂಗದ ಸವಾಲುಗಳನ್ನು ಎದುರಿಸುವಂತಹ ತರಬೇತಿಗಳನ್ನು ನೀಡುತ್ತಿದೆ ಎಂದರು. 


ಅಪ್‌ಸ್ಕಿಲ್ ಮಂಗಳೂರಿನ ಸಹ ಸಂಸ್ಥಾಪಕ ಪ್ರಜ್ವಲ್ ಸಂಪನ್ಮೂಲ ವ್ಯಕ್ತಿಯಾಗಿ ಸಂವಾದಾತ್ಮಕ ಮತ್ತು ಪ್ರಯೋಗಾತ್ಮಕ ಚಟುವಟಿಕೆಗಳ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.


ಪಿ.ಹೆಚ್‌ಡಿ. ಪದವಿ ಪಡೆದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಶಾಸ್ತ್ರದ ಪ್ರಾಧ್ಯಾಪಕಿಯರಾದ ಡಾ. ಶ್ರೀದೇವಿ ಮತ್ತು ಡಾ. ಪ್ರತೀಕ್ಷರನ್ನು ಸಮ್ಮಾನಿಸಲಾಯಿತು.


ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಕೀರ್ತನ್ ಮತ್ತು ಬಿ.ಎಡ್. ಹಾಗೂ ಕೆ.ಸೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಶ್ವಿತಾ ಶೆಟ್ಟಿಯವರನ್ನು ಅಭಿನಂದಿಸಲಾಯಿತು.


ಕೆ ಸೆಟ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೆಟ್ ಪರೀಕ್ಷೆಯ ಮೂಲಕ ಪಿ.ಹೆಚ್‌ಡಿ. ಪ್ರವೇಶಕ್ಕೆ ಅರ್ಹತೆ ಪಡೆದ  ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವೈಭವಿ ಮತ್ತು ಕೆ.ಸೆಟ್ ಹಾಗೂ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಿ.ಹೆಚ್‌ಡಿ. ಪ್ರವೇಶಕ್ಕೆ ಅರ್ಹತೆ ಪಡೆದ ವರ್ಷಿತಾ ಎಸ್. ಅವರನ್ನು ಸನ್ಮಾನಿಸ ಲಾಯಿತು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ. ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಷಿತಾ ಎಸ್. ಅತಿಥಿಗಳನ್ನು ಪರಿಚಯಿಸಿದರು.


ವೈಭವಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕರಾದ  ಹರ್ಷರಾಣಿ, ಭಾರತಿ, ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಕಾರ್ತಿಕ್ ಜೆ.ಎಸ್., ಉಪನ್ಯಾಸಕರಾದ ನಿರೀಕ್ಷಾ ಪಿ., ಕೆರೋಲಿನ್ ವೆನಿಸ್ಸಾ ಪಿಂಟೋ, ಶೋಭಿತಾ ಹೆಗ್ಡೆ  ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top