ಸುರತ್ಕಲ್: ಭಾರತೀಯ ಮೂಲದ ಕ್ರೀಡೆಯಾದ ಕಬಡ್ಡಿ ಗ್ರಾಮೀಣ ಪ್ರದೇಶದ ಜನಪ್ರಿಯ ಕ್ರೀಡೆಯಾದರೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ದೈಹಿಕ ಸದೃಢತೆ, ಚುರುಕುತನ, ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವ ಕಬಡ್ಡಿ ಕ್ರೀಡೆಗೆ ಯುವ ಜನರ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ) ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಆಯೋಜಿಸಿದ್ದ ಗೋವಿಂದ ದಾಸ ಕಬಡ್ಡಿ ಲೀಗ್ ಸೀಸನ್-1ನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ನಿರಂತರವಾಗಿ ಆಯೋಜಿಸಿದ್ದ ಗೋವಿಂದ ದಾಸ ಪ್ರೀಮೀಯರ್ ಲೀಗ್ ಪಂದ್ಯಾವಳಿಗಳ ಯಶಸ್ಸಿನಿಂದ ಸ್ಪೂರ್ತಿಗೊಂಡು ಪ್ರಸ್ತುತ ವರ್ಷ ಪ್ರಥಮ ಬಾರಿಗೆ ಗೋವಿಂದ ದಾಸ ಕಬಡ್ಡಿ ಲೀಗ್ ಸೀಸನ್-1ನ್ನು ಆರಂಭಿಸಲಾಗಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದರು.
ಪ್ರತೀಕ್ಷಾ ಸ್ವಾಗತಿಸಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅನನ್ಯಾ ವಂದಿಸಿದರು.ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ., ಸ್ಟಾಫ್ ಸೆಕ್ರಟರಿ ಗೀತಾ ಕೆ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ:
ಉದ್ಯಮಿ ಪೃಥ್ವಿರಾಜ್ ಶೆಟ್ಟಿ ಮತ್ತು ತುಳುನಾಡ ತುಳುವೆ ಸಂಸ್ಥೆಯ ಸ್ಥಾಪಕ ಆಕಾಶ್ ಕರ್ಕೇರ ಮುಖ್ಯ ಅತಿಥಿಗಳಾಗಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಝ್ಯೂಯೀಸ್ ತಂಡವು ಪ್ರಥಮ ಪ್ರಶಸ್ತಿಯನ್ನು ಮತ್ತು ಟ್ರೆಡೆಂಟ್ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿತು. ತ್ರಿಶೂಲ್ ಆಚಾರ್ಯ ಉತ್ತಮ ರೈಡರ್ ಪ್ರಶಸ್ತಿ, ಹರ್ಷಿತ್ ಸುವರ್ಣ ಉತ್ತಮ ಡಿಫೆಂಡರ್ ಪ್ರಶಸ್ತಿ ಮತ್ತು ಮಂಜು ಅಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ಉಪನ್ಯಾಸಕ ಧನ್ಯಕುಮಾರ್ ವೆಂಕಣ್ಣವರ್ ಉಪಸ್ಥಿತರಿದ್ದರು. ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮೋಹನ್ ಎಂ., ಧನುಷ್ ಮತ್ತು ಜಗದೀಶ್ ತೀರ್ಪುಗಾರರಾಗಿ ಸಹಕರಿಸಿದರು. ಆದಿತ್ಯ ಕೈಕಂಬ ವೀಕ್ಷಕ ವಿವರಣೆ ನೀಡಿದರು. ಸುದರ್ಶನ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ