ರಾಜ್ಯ ಮಟ್ಟದ ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ

Upayuktha
0


ದಾವಣಗೆರೆ:
ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಬಸವ ಜಯಂತಿ ಪ್ರಯುಕ್ತ 50 ಪೈಸೆ  ಅಂಚೆ ಕಾರ್ಡ್‌ನಲ್ಲಿ  ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ ಆಯೋಜಿಸಲಾಗಿದೆ  ಎಂದು ಸಂಸ್ಥೆಯ ಸಂಸ್ಥಾಪಕರು, ತೀರ್ಪುಗಾರರಲ್ಲಿ ಒಬ್ಬರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ವಯೋಮಾನದ ಹಂತದಲ್ಲಿ ವಿವಿಧ ವಿಭಾಗಗಳಾಗಿ ವಿಂಗಡಿಸಿ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುವುದು. ಸ್ಪರ್ಧಿಗಳು ತಮ್ಮ ಹೆಸರು, ವಯಸ್ಸು, ವ್ಯಾಟ್ಸಪ್ ಸಂಖ್ಯೆಯೊಂದಿಗೆ ಶ್ರೀ ಬಸವಣ್ಣನ ಚಿತ್ರ  ಬರೆದು 30-4-2025 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಪ್ರಕಟಿಸಿದ್ದಾರೆ. 


ಸ್ಪರ್ಧಿಗಳು ಆಂಗ್ಲ  ಭಾಷೆಯಲ್ಲಿ ವಿಳಾಸ ಕಳಿಸಿದರೆ ಸ್ವೀಕರಿಸಲಾಗುವುದಿಲ್ಲ. ಚಿತ್ರ ಬರೆದು ಕಳಿಸುವ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, #588, `ಕನ್ನಡ ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ - 577002 ಇಲ್ಲಿಗೆ ಕಳಿಸಬೇಕು. 


ಹೆಚ್ಚಿನ ಮಾಹಿತಿಗೆ ಮೊ.9538732777 ಸಂಪರ್ಕಿಸಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top