ಜನಿವಾರ ಪ್ರಕರಣ ತೀವ್ರ ಖಂಡನೀಯ: ಸೋಸಲೆ ಶ್ರೀಗಳು

Upayuktha
0


 


ಮೈಸೂರು: ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಯ ಸಿ.ಇ‌.ಟಿ. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದೆ. ಜನಿವಾರ ಎಂದರೆ ಅದು ಕೇವಲ ಮೂರು ಎಳೆಗಳ ಹತ್ತಿಯ ದಾರ ಮಾತ್ರ ಅಲ್ಲ. ಅದು ವಿಪ್ರರೂ ಸೇರಿದಂತೆ ಆರ್ಯ ವೈಶ್ಯರು, ಕ್ಷತ್ರಿಯ ಸಮುದಾಯದವರ ಆಚಾರ, ವಿಚಾರ, ಅನುಷ್ಠಾನದ ಸಂಕೇತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣ ಈಗಾಗಲೇ ರಾಜ್ಯಾದ್ಯಂತ ಸದ್ದು ಮಾಡಿದೆ. ಈ ಪ್ರಕರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮೈಸೂರಿನ ಸೋಸಲೆ ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.


ಈ ಬಗ್ಗೆ ರಾಜ್ಯ ಸರ್ಕಾರವು ಕಠಿಣ ಕ್ರಮವನ್ನು ವಹಿಸಿರುವುದನ್ನು ಸ್ವಾಗತಿಸಿರುವ ಅವರು, ಇನ್ನು ಮುಂದೆ ಈ ರೀತಿ ಪ್ರಸಂಗಗಳು ಯಾವುದೇ ಧಾರ್ಮಿಕ ಸಂಕೇತಗಳ ನಡೆಯಬಾರದು ಎಂದು ಆಗ್ರಹಿಸಿದ್ದಾರೆ.


ಪ್ರಕರಣದಲ್ಲಿ ನೊಂದವರ ಪರವಾಗಿ ಶ್ರೀ ಮಠ ಇದೆ. ಆ ವಿದ್ಯಾರ್ಥಿಯ ಶೈಕ್ಷಣಿಕ ಬದುಕಿಗೆ ಸದರಿ ಪ್ರಸಂಗದಿಂದ ಯಾವುದೇ ಅನ್ಯಾಯ‌ ಆಗಬಾರದು. ಈ ದಿಸೆಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top