ಶ್ರೀರಾಮನವಮಿ ವಿಶೇಷ : ಶ್ರೀರಾಮ ಅವತಾರದ ಹಿಂದಿನ ಉದ್ದೇಶಗಳು

Upayuktha
0



ಶ್ರೀರಾಮಚರಿತಮಾನಸದಲ್ಲಿ ‘ಹರಿಯ ಅವತಾರಕ್ಕೆ ಯಾವ ಕಾರಣವಿರುತ್ತದೆಯೋ, ಆ ಕಾರಣವೇ ಮೂಲ ಎಂದು ಹೇಳಲಾಗುವುದಿಲ್ಲ’. ಶ್ರೀಹರಿಯ ಶ್ರೀರಾಮಾವತಾರದ ವಿಷಯದಲ್ಲಿಯೂ ಇಂತಹ ಅನೇಕ ತಿಳಿದಿರುವ ಮತ್ತು ಅಜ್ಞಾತ ಕಾರಣಗಳಿವೆ. ಅವು ಪ್ರತಿ ಕಲ್ಪ-ಯುಗದಲ್ಲಿ ಪ್ರಭು ಶ್ರೀರಾಮನ ಜನ್ಮ ಧರಿಸುವುದನ್ನು ನಿಶ್ಚಯಿಸುತ್ತವೆ.


1. ಜಯ-ವಿಜಯರಿಗೆ ತಗುಲಿದ ಶಾಪ, ಅವರನ್ನು ಮುಕ್ತಗೊಳಿಸಲು ಜನ್ಮತಾಳಿದ ಶ್ರೀ ರಾಮಚಂದ್ರ ಶ್ರೀಹರಿಯ ಇಬ್ಬರು ಪ್ರೀತಿಯ ದ್ವಾರಪಾಲಕರಾದ ಜಯ ಮತ್ತು ವಿಜಯ ಎಂದು ನಮಗೆಲ್ಲರಿಗೂ ತಿಳಿದಿದೆ. 


ಸನಕಾದಿಯ ಶಾಪದಿಂದಾಗಿ ಇಬ್ಬರೂ ಸಹೋದರರು ರಾಕ್ಷಸರ ತಾಮಸಿಕ ದೇಹಗಳನ್ನು ಪಡೆದರು. ಒಂದು ಜನ್ಮದಲ್ಲಿ, ಅವರು ಭೂಮಿಗೆ ಬಂದು ರಾವಣ ಮತ್ತು ಕುಂಭಕರ್ಣ ಎಂಬ ಹೆಸರಿನ, ದೇವತೆಗಳ ಮೇಲೆಯೇ ಜಯ ಸಾಧಿಸಿದ, ಅತ್ಯಂತ ಶಕ್ತಿಶಾಲಿ ಮತ್ತು ಮಹಾವೀರ ರಾಕ್ಷಸರಾದರು. ಅವರ ಸಂಹಾರಕ್ಕಾಗಿ ಶ್ರೀ ರಾಮಚಂದ್ರನ ಜನ್ಮವಾಯಿತು.


2. ಜಾಲಂಧರನೆಂಬ ದೈತ್ಯನನ್ನು ಯುದ್ಧದಲ್ಲಿ ವಧಿಸಿ ಅವನಿಗೆ ಪರಮಪದವನ್ನು ನೀಡಿದ ಶ್ರೀರಾಮ ಒಂದು ಕಲ್ಪದಲ್ಲಿ, ಜಾಲಂಧರನೆಂಬ ಪ್ರಬಲ ರಾಕ್ಷಸನು ಯುದ್ಧದಲ್ಲಿ ಎಲ್ಲಾ ದೇವತೆಗಳನ್ನು ಸೋಲಿಸಿದನು. ದೇವತೆಗಳು ದುಃಖಿತರಾದುದನ್ನು ನೋಡಿದ ಶಿವನು ಜಾಲಂಧರನೊಡನೆ ಘೋರ ಯುದ್ಧವನ್ನು ಮಾಡಿದನು; ಆದರೆ ಆ ಮಹಾಬಲಿ ರಾಕ್ಷಸನ ಹತ್ತಿ ಸಾವು ಸಳಿಯುತ್ತಿರಲಿಲ್ಲ. ಆ ದೈತ್ಯ ರಾಜನ ಪತ್ನಿ ವೃಂದಾ ಮಹಾ ಪತಿವ್ರತೆ, ಇದರಿಂದಾಗಿ ತ್ರಿಪುರಾಸುರನಂತಹ ಅಜೇಯ ಶತ್ರುವನ್ನು ನಾಶಪಡಿಸಿದ ಶಿವನೂ ಆ ಜಾಲಂಧರ ದೈತ್ಯನನ್ನು ಜಯಿಸಲು ಸಾಧ್ಯವಾಗಲಿಲ್ಲ. 


ಆಗ ಭಗವಾನ ಶ್ರೀಹರಿ ವಿಷ್ಣುವು ಮೋಸದಿಂದ ಆ ಪತಿವ್ರತೆ ವೃಂದಾಳ ವ್ರತವನ್ನು ಭಗ್ನಗೊಳಿಸಿ ದೇವತೆಗಳ ಕಾರ್ಯ ನೆರವೇರಿಸಿದನು. ವ್ರಂದಾಳಿಗೆ ರಹಸ್ಯ ತಿಳಿದಾಗ, ಅವಳು ಕೋಪಗೊಂಡು ಭಗವಾನ ಶ್ರೀಹರಿಯನ್ನು ಶಪಿಸಿದಳು. ಆಗ ಲೀಲಾಸಾಗರ ಕೃಪಾಳು ಹರಿಯು ಆ ಸ್ತ್ರೀಯ ಶಾಪವನ್ನು ಪ್ರಮಾಣವಾಗಿ ಸ್ವೀಕರಿಸಿದನು. ಅದೇ ಜಾಲಂಧರನು ಆ ಕಲ್ಪದಲ್ಲಿ ರಾವಣನಾದನು, ಅವನು ಶ್ರೀರಾಮನಿಂದ ಯುದ್ಧದಲ್ಲಿ ವಧಿಸಲ್ಪಟ್ಟನು ಮತ್ತು ಉನ್ನತ ಸ್ಥಾನವನ್ನು ಪಡೆದನು.


3. ದೇವರ್ಷಿ ನಾರದರ ಶಾಪವನ್ನು ಶಿರೋಧಾರ್ಯವೆಂದು ಪರಿಗಣಿಸಿ ಮನುಜಾವತಾರವನ್ನು ತಾಳಿದ ಶ್ರೀಹರಿ ಈ ಪ್ರಸಂಗವು ನಾರದರ ಅಭಿಮಾನ ಮತ್ತು ಮೋಹದೊಂದಿಗೆ ಸಂಬಂಧ ಹೊಂದಿರುವುದರಿಂದ ಬಹಳ ಸ್ವಾರಸ್ಯಕರವಾಗಿದೆ. ಈ ಘಟನೆಗೆ ಸಾಕ್ಷಿಯಾಗಿರುವ ಎರಡು ಗಣಗಳೂ ಶಾಪಗ್ರಸ್ತರಾಗಿದ್ದು, ಶ್ರೀಹರಿ ವಿಷ್ಣುವೂ ಬ್ರಹ್ಮರ್ಷಿ ನಾರದರಿಂದ ಶಾಪಗ್ರಸ್ತರಾಗಿದ್ದಾರೆ.


ರಾಜಕುಮಾರಿ ಶ್ರೀಮತಿಯ ವ್ಯಾಮೋಹದಲ್ಲಿ ಸಿಕ್ಕಿದ ನಾರದಮುನಿಗಳು, ಸ್ವಯಂವರದಲ್ಲಿ ರಾಜಕುಮಾರಿ ತನ್ನನ್ನೇ ಪತಿಯಾಗಿ ಸ್ವೀಕರಿಸುವಂತಾಗಲು ಶ್ರೀವಿಷ್ಣುವಿಗೆ ತನ್ನ ಮೋಹಕ ಹರಿ ರೂಪವನ್ನು ಪ್ರದಾನಿಸುವಂತೆ ಬೇಡಿದರು. ಶ್ರೀವಿಷ್ಣು ಆಗಲಿ ಎಂದು ಹೇಳಲು, ನಾರದಮುನಿಗಳು ಸ್ವಯಂವರದಲ್ಲಿ ‘ತಾನೇ ವರಮಾಲೆಯನ್ನು ಪಡೆಯುವೆನು’ ಎಂಬಂತೆ ಉಪಸ್ಥಿತರಾದರು. 


ಆದರೆ ರಾಜಕುಮಾರಿಯು, ಅವರನ್ನು ದುರ್ಲಕ್ಷಿಸಿ ಶ್ರೀಹರಿ ಅಂದರೆ ಶ್ರೀವಿಷ್ಣುವಿಗೆ  ವಿವಾಹವಾದರು ಮತ್ತು ವಧುವನ್ನು ಕರೆದುಕೊಂಡು ಹೋದರು. ವಿಫಲರಾದ ಇತರ ರಾಜರು ನಿರಾಶೆಯಿಂದ ಮರಳಿದರು. ಪ್ರಲೋಭನೆಗೆ ಒಳಗಾಗಿ ನಾರದಮುನಿಯ ಬುದ್ಧಿಯು ಭ್ರಷ್ಟವಾಯಿತು, ರಾಜಕುಮಾರಿಯು ತನಗೆ ಸಿಗದ ಕಾರಣ ಅವನು ಬಹಳ ಚಿಂತಾಕ್ರಾಂತನಾದರು. 


ಆಗ ಶಿವನ ಗಣಗಳು ಮುಗುಳ್ನಕ್ಕು, ‘ಹೇ ಮುನಿ! ಒಮ್ಮೆ ಹೋಗಿ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ’ ಎಂದು ಹೇಳಿ, ಇಬ್ಬರೂ ಓಡಿಹೋದರು. ನಾರದಮುನಿಯು ನೀರಿನಲ್ಲಿ ಸ್ವಂತ ಮುಖವನ್ನು ನೋಡಿದರು. ತನ್ನ ರೂಪವನ್ನು ನೋಡಿ ಅವರು ತುಂಬಾ ಕೋಪಗೊಂಡರು. ಅವರು ಶಿವನ ಆ ಗಣಗಳನ್ನು ಕಠೋರವಾಗಿ ಶಾಪ ನೀಡುತ್ತ, “ನೀವಿಬ್ಬರೂ ಮೋಸಗೊಳಿಸುವ-ಪಾಪಿ ರಾಕ್ಷಸರಾಗುವಿರಿ, ನೀವು ನನ್ನನ್ನು ಗೇಲಿ ಮಾಡಿದ್ದೀರಿ, ಈಗ ಅದರ ಫಲವನ್ನು ಅನುಭವಿಸಿ. ನಂತರ ಯಾರಾದರೂ ಋಷಿಗಳನ್ನು ಗೇಲಿ ಮಾಡಿ.”


ನಂತರ, ಆ ಶಿವಗಣಗಳು ನಾರದರ ಶಾಪದಿಂದ ಮುಕ್ತಿಗಾಗಿ ಪ್ರಾರ್ಥಿಸಿದಾಗ, ನಾರದರಿಗೆ ಅವರ ಮೇಲೆ ಕರುಣೆ ಬಂದು, “ನೀವಿಬ್ಬರೂ ರಾಕ್ಷಸರಾಗುವಿರಿ (ರಾವಣ ಮತ್ತು ಕುಂಭಕರ್ಣ). ನೀವು ಉತ್ತಮ ಸಮೃದ್ಧಿ, ತೇಜಸ್ಸು ಮತ್ತು ಶಕ್ತಿಯನ್ನು ಪಡೆಯುತ್ತೀರಿ. ನೀವು ಶಸ್ತ್ರಾಸ್ತ್ರಗಳ ಬಲದಿಂದ ಇಡೀ ಜಗತ್ತನ್ನು ಗೆದ್ದಾಗ, ಭಗವಾನ್ ವಿಷ್ಣುವು ಮನುಷ್ಯನ ದೇಹವನ್ನು (ಶ್ರೀ ರಾಮಾವತಾರ) ಧರಿಸಿಕೊಳ್ಳುತ್ತಾನೆ ಮತ್ತು ನೀವು ಶ್ರೀ ಹರಿಯ ಕೈಯಲ್ಲಿ ವಧಿಸಲ್ಪಡುವಿರಿ. ಆದ್ದರಿಂದ ನೀವು ಮಕ್ತರಾಗಿ ಮತ್ತೆ ಭೂಮಿಯ ಮೇಲೆ ಎಂದಿಗೂ ಜನ್ಮ ಪಡೆಯುವುದಿಲ್ಲ.”


ನಾರದಮುನಿಯು ಶ್ರೀಹರಿಯನ್ನುದ್ದೇಶಿಸಿ ಹೇಳುತ್ತಾರೆ, “ಯಾವ ಶರೀರವನ್ನು ಧರಿಸಿ ನನ್ನನ್ನು ವಂಚಿಸಿದ್ದೀರೋ, ಅದೇ ಶರೀರವನ್ನು ನೀವೂ ಧರಿಸುತ್ತೀರಿ ಎಂದು ನಾನು ನಿಮಗೆ ಶಾಪ ನೀಡುತ್ತೇನೆ. ನೀವು ನನಗೆ ವಾನರನ ದೇಹ ಕೊಟ್ಟಿದ್ದಕ್ಕೆ, ನಿಮಗೆ ವಾನರರೇ ಸಹಾಯ ಮಾಡುತ್ತವೆ. ನಾನು ಹಂಬಲಿಸುತ್ತಿದ್ದ ಸ್ತ್ರೀಯನ್ನು ನನ್ನಿಂದ ಬೇರ್ಪಡಿಸಿ ನನಗೆ ಅಹಿತವನ್ನುಂಟು ಮಾಡಿದ್ದೀರಿ. ಆದುದರಿಂದ ನೀವು ಕೂಡ ನಿಮ್ಮ ಹೆಂಡತಿಯನ್ನು ಕಳೆದುಕೊಂಡು ದುಃಖಪಡಬೇಕಾಗುವುದು”. ಆ ಕಲ್ಪದಲ್ಲಿ ದೇವರ್ಷಿ ನಾರದರ ಶಾಪವು ಶ್ರೀರಾಮನ ಜನನಕ್ಕೆ ಕಾರಣವಾಯಿತು.




-ವಿನೋದ್ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top