ಬಳ್ಳಾರಿ: ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಇದೇ ಏ 6 ರಂದು ಬೆ 9 ಗಂಟೆಯಿಂದ ಸಂಜೆ 5 ಗಂಟೆಯವರಗೆ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಬಿಪಿಎಸ್‌ಸಿ ಶಾಲೆಯ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತ ರಕ್ಷಣಾ ವೇದಿಕೆಯ ಮುಖಂಡರು 10ನೇ ತರಗತಿಯಿಂದ ಯಾವುದೇ ಪದವಿ ಪಡೆದ ಯುವಕರು 18-30 ವಯೋಮಿತಿ ಇರುವವರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಬಳ್ಳಾರಿ ಜಿಲ್ಲಾ ಅಹಿಂದ ಸಂಘಟನೆ, ಕ್ಯಾಡ್‌ಮ್ಯಾಕ್ಸ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 9632938447, 8867288665, 7411472949, 8123620541,8904450590 ಅನ್ನು ಸಂಪರ್ಕಿಸಲು ಕೋರಲಾಗಿದೆ. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಭಟ್ಟಿ ಎರ್ರಿಸ್ವಾಮಿ, ಅಹಿಂದ ಜಿಲ್ಲಾಧ್ಯಕ್ಷರಾದ ಜೋಗಿನ ಚಂದ್ರಪ್ಪ, ಪದಾಧಿಕಾರಿಗಳಾದ ಕೆ.ಶಿವಕುಮಾರ್, ಅಸುಂಡಿ ಪರಮೇಶ್, ಕೆ.ಬಿ.ವಿರೂಪಾಕ್ಷಿ, ಎಂ.ಜಿ.ಶ್ರೀಕಾಂತ್, ಕೆ.ಲಲಿತಾ, ಕೆ.ಸೂರ್ಯದೇವ, ಬೆಳ್ಳಿ ಕಟ್ಟೆಪ್ಪ, ಕೆ.ನಾಗರಾಜ, ಕೆ.ಗವಿಸಿದ್ದಪ್ಪ ಇನ್ನಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ