ಶಿವಮೊಗ್ಗ : ಕ್ರಿಬ್ಕೋ ಸಹಕಾರಿ ಗೊಬ್ಬರ ಸಂಸ್ಥೆಯಿಂದ ಶಿವಮೊಗ್ಗದ ಹಾರನಹಳ್ಳಿಯಲ್ಲಿ ಸಿ ಆರ್ ಡಿ ಎಂ ಪಿ ಸಿ ಎಸ್ ಸೊಸೈಟಿಯಲ್ಲಿ ರೈತರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಸುಮಾರು 30 - 35 ಜನ ರೈತರು ಹಾಜರಿದ್ದರು. ಸಭೆಯಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಇದರ ಬಗ್ಗೆ ಇತ್ತೀಚಿಗೆ ಸಂಸತ್ ಭವನದಲ್ಲಿ ಇದರ ಕುರಿತು ಮಸೂದೆ ಜಾರಿ ಮಾಡಿರುವ ಕುರಿತು ಕೇಂದ್ರ ಸಹಕಾರಿ ಸಚಿವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರಿಬ್ಕೋ ಸಂಸ್ಥೆಯ ಹಿರಿಯ ಕ್ಷೇತ್ರಾಧಿಕಾರಿ ಕಾರ್ತಿಕ್.ಕೆ.ಬಿ, ಸಿ ಆರ್ ಡಿ ಎಂ ಪಿ ಸಿ ಎಸ್ ನ ಕಾರ್ಯದರ್ಶಿ ಶ್ರೀ ಪಾರುಕ್, ನಿರ್ದೇಶಕರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ