ಕೋಡಿಕಲ್: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಶೀನ ನಾಯ್ಕ್ ಪರ್ಪುಲಾಡಿ ಆಯ್ಕೆ

Upayuktha
0



ಕೋಡಿಕಲ್: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಚೇರಿಯಲ್ಲಿ ಮಾಜಿ ಅಧ್ಯಕ್ಷ ರಾಮಕೃಷ್ಣ ಜೋಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಹಾಗೂ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ನೇಮಕ ನಡೆಯಿತು.


ವಿಶ್ವ ಭಾರತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶೀನನಾಯ್ಕ್ ಪರ್ಪುಲಾಡಿ, ಗೌರವಾಧ್ಯಕ್ಷರಾಗಿ ಯೋಗೀಶ್ ಕಲ್ಪನೆ, ಉಪಾಧ್ಯಕ್ಷರಾಗಿ ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ್ ನಾಯ್ಕ್, ಕೋಶಾಧಿಕಾರಿಯಾಗಿ ಸುಜನ್ ಕುಮಾರ್, ಗೌರವ ಸಲಹೆಗಾರರಾಗಿ ರಾಮಕೃಷ್ಣ ಜೋಕಟ್ಟೆ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಕೋಡಿಕಲ್ ಹಾಗೂ 10 ಜನ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗೊಂಡರು. ಲೆಕ್ಕಪತ್ರವನ್ನು ಶಿವಪ್ರಸಾದ್ ಶೆಟ್ಟಿ ಮಂಡಿಸಿದರು. ರಾಜೇಶ್ ಸಾಲಿಯಾನ್ ಸ್ವಾಗತಿಸಿದರು. ರಾಜೇಶ್ ಕುಡ್ಲ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top