ಏಪ್ರಿಲ್‌ 4-5ರಂದು ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ ವಿಚಾರ ಸಂಕಿರಣ

Upayuktha
0


ಮಂಗಳೂರು: ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ ಏಪ್ರಿಲ್‌ 4-5 ರಂದು “INNOVATIVE PRACTICES IN CLINICAL TRAINING & PATIENT SAFETY” ರಾಷ್ಟ್ರೀಯ ವಿಚಾರಸಂಕಿರಣವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿರುವುದು.

ವಿಚಾರಸಂಕಿರಣವನ್ನು ಶ್ರೀನಿವಾಸ್ ಯುನಿವರ್ಸಿಟಿ ಚಾನ್ಸೆಲರ್ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಸಿಎ.ಎ ರಾಘವೇಂದ್ರರಾವ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ವಸುಧ ಲೈಫ್ ಸೈನ್ಸಸ್‌ನ ದಿನೇಶ್‌ಚಂದ್ರ ಎ ಹೆಗ್ಡೆ ಬ್ರಹ್ಮಾವರ ಭಾಗವಹಿಸಲಿರುವರು.

ಗೌರವಾನ್ವಿತ ಅತಿಥಿಗಳಾಗಿ  ಶ್ರೀನಿವಾಸ್ ಯುನಿವರ್ಸಿಟಿ ಚಾನ್ಸೆಲರ್ ಮತ್ತು ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ್ ರಾವ್,  ಶ್ರೀನಿವಾಸ್ ಯುನಿವರ್ಸಿಟಿ ಬೋರ್ಡ್ ಆಫ್ ಗವನರ‍್ಸ್ ವಿಜಯಲಕ್ಷ್ಮೀ ಆರ್. ರಾವ್, ಶ್ರೀನಿವಾಸ್ ಯುನಿವರ್ಸಿಟಿ ಬೋರ್ಡ್ ಆಫ್ ಗವರ್ನರ‍್ಸ್ ಮತ್ತು ಎ.ಶಾಮರಾವ್ ಪ್ರತಿಷ್ಠಾನ ಕಾರ್ಯದರ್ಶಿ ಪ್ರೊ. ಇ.ಆರ್. ಎ. ಮಿತ್ರಾ ಎಸ್.ರಾವ್ ಭಾಗವಹಿಸಲಿರುವರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸುರುಳಿವೆಲ್ ರಾಜನ್, ಡಾ. ಕೇಶವ ಪೈ, ಡಾ. ಪ್ರಕಾಶ್ ಚಂದ್ರ, ಡಾ ರಾಧಿಕಾ ಶೆಣೈ, ಶ್ರೀ ವಿಜಯ್ ಕಾಮತ್ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಔಷಧೀಯ ವಿಜ್ಞಾನದ ಸಂಶೋಧನಾ ಪತ್ರಗಳ ಪ್ರದರ್ಶನ ನಡೆಯಲಿದೆ ಎಂದು ಪ್ರಾಂಶುಪಾಲ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್.ಶಬರಾಯ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top