ಮಂಗಳೂರು: ನಮ್ಮ ಪರಂಪರೆಯ ಶಾಸ್ತ್ರೀಯ ಕಲೆಗಳಲ್ಲಿ ಭರತನಾಟ್ಯ ಕಲೆಗೆ ಪ್ರಾಶಸ್ತ್ಯವಿದೆ. ಈ ಕಲೆಯ ಕಲಿಯುಕೆಯಿಂದ ವಿಶೇಷ ಅನುಭೂತಿಯನ್ನು ಪಡೆಯಲು ಸಾಧ್ಯವಾಗಬಹುದು ಎಂಬ ನಂಬಿಕೆಯೊಂದಿಗೆ ಈ ಕಲೆಗಳನ್ನು ಅತ್ಯಂತ ಶಾಸ್ತ್ರೀಯವಾಗಿ ವೈಜ್ಞಾನಿಕವಾಗಿ ಬೆಳೆಸಿಕೊಂಡು ಬಂದಿದ್ದಾರೆ. ಆತ್ಮ ಸಂಶೋಧನೆ ಕೆಲಸ ಸಹ ಈ ಕಲಾಪ್ರಕಾರದಲ್ಲಿ ಆಗುತ್ತದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು.
ಅವರು ಇತ್ತೀಚೆಗೆ ಭರತಾಂಜಲಿ ನೃತ್ಯ ಸಂಸ್ಥೆಯವರು ಸೈಂಟ್ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಆಡಿಟೋರಿಯಂ ಆಯೋಜಿಸಿದ ಕಿಂಕಿಣಿ ತ್ರಿಂಶತ್ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ತಾ ಥೈ ಹ ಹ ಎಂಬ ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇಂದಿನ ವಿದ್ಯಮಾನದಲ್ಲಿ ಶಾಲೆಗಳಲ್ಲಿ ಮನೆಗಳಲ್ಲಿ ಸಿಗದಂತಹ ಸಂಸ್ಕಾರಗಳನ್ನು ಈ ಕಲೆಯ ನೀಡುತ್ತದೆ ಹಾಗೆ ಈ ಕಲಾಪ್ರಕಾರಗಳನ್ನು ಕಳಿಸುವ ಗುರುಗಳು ಮುಂದಿನ ತಲೆಮಾರಿಗೆ ಹಸ್ತಾಂತರದ ಕೆಲಸ ಮಾಡ್ತಾ ಬಂದಿದ್ದಾರೆ. ಆತ್ಮವನ್ನು ಪರಮಾತ್ಮನೊಂದಿಗೆ ಸಮೀಕರಣಗೊಳಿಸುವಂತಹ ಒಂದು ವಿಶೇಷ ಅನುಭೂತಿಯನ್ನು ಈ ಕಲಾ ಪ್ರಕಾರದಲ್ಲಿ ನಾವು ಕಾಣಬಹುದು ಎಂದರು.
ಪ್ರದರ್ಶನದ ಬಗ್ಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡ ಕಲಾ ಅಂಕಣಗಾರರಾದ ವಿದುಷಿ ಪ್ರತಿಭಾ ಸಾಮಗರವರು, ಇದೊಂದು ನೃತ್ಯ ಕ್ಷೇತ್ರದ ಹೊಸ ಪ್ರಯೋಗ ಭರತನಾಟ್ಯ ಮತ್ತು ಥಿಯೇಟರ್ ಮಾಧ್ಯಮದ ಮೂಲಕ ತುಂಬಿದ ಪ್ರಾಂಗಣದ ಎಲ್ಲಾ ಪ್ರೇಕ್ಷಕರಿಗೆ ಸುಮಾರು ಒಂದುವರೆ ಗಂಟೆಗಳಷ್ಟು ಸಮಯ ಒಂದು ನವೀನ ಕಂಟೆಂಪರರಿ ಮಾದರಿಯಲ್ಲಿ, ಮನರಂಜನೆ ಮತ್ತು ಹೊಸ ಚಿಂತನೆಗೆ ಒಳಗಾಗಿಸಿದರು. ಇಂತಹ ಹೊಸತನದ ಪ್ರಯೋಗವನ್ನು ಮಾಡಿಸಲು ಧೈರ್ಯ ತೋರಿದ ಭರತಾಂಜಲಿ ಸಂಸ್ಥೆಯನ್ನು ಶ್ಲಾಘಿಸಿದರು.
ಗುರುಗಳಾದ ಉಳ್ಳಾಲ ಮೋಹನಕುಮಾರ್ ದೀಪವನ್ನು ಬೆಳಗಿಸಿ ಶುಭ ಹಾರೈಸಿದರು. ಸಂಸ್ಕಾರ ಭಾರತೀಯ ವಿಭಾಗ ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶಾರದಾ ಮಣಿ ಶೇಖರ್ ವಿದುಷಿ ಗೀತಾ ಸರಳಾಯ, ಟ್ರಸ್ಟಿ ವೀಣಾ ಶಾಸ್ತ್ರಿ, ವಿದುಷಿ ಪ್ರಕ್ಷಿಲ ಜೈನ್, ಮೊದಲಾದವರು ಉಪಸ್ಥಿತರಿದ್ದರು.
ಭರತಾಂಜಲಿಯ ಗುರುಗಳಾದ ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಅಂತರಾಷ್ಟ್ರೀಯ ಕಲಾವಿದರಾದ ಶುಭಮಣಿ ಚಂದ್ರಶೇಖರ್, ಇಂದು ವೇಣು ಬೆಂಗಳೂರು, ಶ್ರುತಿ ಗೋಪಾಲ್ ಬೆಂಗಳೂರು, ರೇಷ್ಮಾ ಶೆಟ್ಟಿ ಮುಂಬೈ, ಪ್ರೀತಿ ಭಾರದ್ವಾಜ್ ಬೆಂಗಳೂರು ಮೊದಲಾದವರು ಕಾರ್ಯಕ್ರಮ ನೀಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ