ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಸೇವಾ ಭಾರತೀಯ ಚೇತನ ಬಾಲ ವಿಕಾಸ ಕೇಂದ್ರಕ್ಕೆ ದಾನಿಗಳ ಸಹಾಯದಿಂದ ಜೋಡಿಸಲ್ಪಟ್ಟ ಸುಮಾರು 50,000 ರೂ. ಮೊತ್ತದಲ್ಲಿ ದಿವ್ಯ ಚೇತನ ಉಪಯೋಗಿ ಸಾಧನಗಳನ್ನು ಹಸ್ತಾಂತರಿಸಲಾಯಿತು.
ಪೇಷೆಂಟ್ ಮಂಚ -1, ಏರ್ ಬೆಡ್ -1, ವಾಕರ್ -1, ವಾಕಿಂಗ್ ಸ್ಟಿಕ್ -5, ಸಿಪಿ ಕುರ್ಚಿ -1, ಲರ್ನಿಂಗ್ ಕಿಟ್ - 1, ನಿತ್ಯೋಪಯೋಗಿ ವಸ್ತು ಗುರುತು ಬೋರ್ಡ್ -1 ಹಸ್ತಾಂತರಿಸಲಾಯಿತು.
ಸೇವಾ ಭಾರತೀಯ ಕಾರ್ಯದರ್ಶಿ ನಾಗರಾಜ್ ಭಟ್, ಚೇತನದ ಮುಖ್ಯೋಪಾಧ್ಯಾಯಿನಿ ಸುಪ್ರೀತಾ, ವಿದ್ಯಾ, ಸೇವಾ ಭಾರತೀಯ ಸ್ವಯಂಸೇವಕರಾದ ವಿಟ್ಠಲದಾಸ್ ಮಲ್ಯ, ರೋಹಿತಾಕ್ಷ, ಉಮೇಶ್ ಶೇನೋಯ್, ಪೋಷಕರಾದ ಪ್ರಕಾಶ್ ಪೈ ಮತ್ತು ಸಿಬಂದಿ ವರ್ಗ ಸೇವಾ ಭಾರತಿ ಕಡೆಯಿಂದ ವಸ್ತುಗಳನ್ನು ಸ್ವೀಕರಿಸಿದರು. ಸಕ್ಷಮದ ರಾಜಶೇಖರ ಭಟ್ ಕಾಕುಂಜೆ, ಹರೀಶ್ ಪ್ರಭು, ಸತೀಶ್ ರಾವ್, ಭಾಸ್ಕರ ಹೊಸಮನೆ, ಸಂಧ್ಯಾ ಪ್ರಸಾದ್, ದಿವ್ಯ ಪ್ರಭು, ಗೀತಾ ಲಕ್ಷ್ಮೀಶ ಮತ್ತು ಶ್ಯಾಮಲಾ ಭಟ್ ಉಪಸ್ಥಿತರಿದ್ದರು.
ಸಕ್ಷಮ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೇವಾ ಭಾರತೀಯ ಕಾರ್ಯದರ್ಶಿ ನಾಗರಾಜ್ ಅವರು ಸಕ್ಷಮ ಮತ್ತು ಎಲ್ಲ ಸಂಬಂಧಪಟ್ಟ ದಾನಿಗಳಿಗೆ ವಂದಿಸಿದರು. ಪೋಷಕರಾದ ಪ್ರಕಾಶ್ ಪೈ ಅಭಿನಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ