ಚೀಟಿ ವ್ಯವಹಾರದಲ್ಲಿ 200 ಕೋಟಿ ರೂ ವಂಚಿಸಿ ನಾಪತ್ತೆ: ಸಂತ್ರಸ್ತರು ಪೊಲೀಸ್‌ ಠಾಣೆಗೆ

Upayuktha
0



ಬಳ್ಳಾರಿ:
ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ಮಾಸಿಕ ಶೇ 25 ರಷ್ಟು ಲಾಭ (ಬಡ್ಡಿ) ನೀಡುವುದಾಗಿ ವಂಚಿಸುತ್ತಿದ್ದ ಟಿ. ವಿಶ್ವನಾಥ ಕುಟುಂಬದ ಸಮೇತ ಪರಾರಿಯಾಗಿದ್ದಾನೆ.

ಈತನ ಚೀಟಿ ವ್ಯವಹಾರದಲ್ಲಿ  ಹಣ ತೊಡಗಿಸಿದ್ದ ನೂರಾರು ಜನ  ಬ್ರೂಸ್ ಪೇಟೆ ಠಾಣೆಗೆ ಬಂದು ದೂರು ಕೊಡಲು ಮುಂದಾಗಿ ದ್ದರು. ಪ್ರಕರಣದಲ್ಲಿ ಬ್ರೂಸ್ ಪೇಟೆ ಪೊಲೀಸರು ವಿಶ್ವನಾಥನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ನಿಮ್ಮ ಹಣ ಎಲ್ಲಿ ಹೋಗಲ್ಲ ಕೊಡುತ್ತೇನೆಂದು ಭರವಸೆ ನೀಡಿ ರಾತ್ರಿ ನಾನು ಆತ್ಮ ಹತ್ಯೆಮಾಡಿಕೊಳ್ಳುವುದಾಗಿ ಚೀಟಿ ಬರೆದಿಟ್ಟು ಪರಾರಿಯಾಗಿ ದ್ದಾನೆ. 

ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು ಎಂದು ಕೆಲ ದಿನಗಳ ಹಿಂದೆ ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲೀಕ ಟಿ.ವಿಶ್ವನಾಥ(58) ನನ್ನು ಪೊಲೀಸರು ಬಂಧಿಸಿ 19,38,500 ರೂ. ಮತ್ತು ಗ್ರಾಹಕರಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗೂ ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.

ವಂಚಕ ವಿಶ್ವನಾಥ ಕಳೆದ ಸೆಪ್ಟಂಬರ್ ನಿಂದ ಹರ್ಬಲ್ ಲೈಫ್, ಕಿರಾಣಿ ಮತ್ತು ಪೆಟ್ರೋಲ್ ಖರೀದಿಸಿದವರಿಗೆ ಮಾತ್ರ ಚೀಟಿ ಕಟ್ಟಿಸಿಕೊಳ್ಳುತ್ತಿದ್ದ.  ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣ ವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದ. 

ತಾನು ತೆಗೆದುಕೊಳ್ಳುವ ಹಣವನ್ನು ವೀರೇಶ್, ಸಿದ್ದಪ್ಪ, ಸುರೇಶ್, ಬಸವರಾಜ್, ವೆಂಕಟೇಶ್, ಸೂರಜ್ ಎಂಬುವವರಿಂದ ತೆಗೆದುಕೊಳ್ಳುತ್ತಿದ್ದನಂತೆ. ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿ.ಐ. ಟಿ. ಮಹಾಂತೇಶ್ ಮತ್ತು ಪೊಲೀಸ್ ಸಿಬ್ಬಂದಿ ಬಂಧಿಸಿತ್ತು. ಈ ವಿಷಯ ತಿಳಿದು ಹಣಕಟ್ಟಿದ ಮಹಿಳೆ ಠಾಣೆಗೆ ಬಂದು ವಿಶ್ವನಾಥ್ ಒಂದಲ್ಲ ಎರಡಲ್ಲ 200 ಕೋಟಿ ರೂ. ವಂಚನೆ ಮಾಡಿದ್ದಾನೆ, ಆರು ಜನ ಈತನಿಗೆ ಬೆಂಬಲಿಗರು ಆಗಿದ್ದಾರೆಂದು ದೂರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top