ದಾವಣಗೆರೆ: ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವು ಅತಿ ಹೆಚ್ಚು ಜನಸಂಖ್ಯೆ ಇದ್ದರೂ ನಾವು ಒಟ್ಟು ಆದಿ ಕರ್ನಾಟಕ, ಎ.ಕೆ. ಹಾಗೂ ಹರಿಜನ ಇನ್ನೂ ಅನೇಕ ಹೆಸರಿನಿಂದ ಕರೆಯಲ್ಪಡುವ ನಾವು ಉತ್ತರ ಕರ್ನಾಟಕ ದಲ್ಲಿ ನಮ್ಮನ್ನು ಮಾದಿಗರು ಹಾಗೂ ಮಾದರು ಎಂದು ಬರೆಸಿಕೊಂಡಿರುತ್ತದೆ. ಅದಕ್ಕೆ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಬೇರೆ ಬೇರೆ ಜಾತಿ ಹೆಸರಲ್ಲಿ ಬರೆಸಿಕೊಂಡಿರುತ್ತಾರೆ. ಹೀಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಆದ್ದರಿಂದ ಕರ್ನಾಟಕದಲ್ಲಿ ಮಾದಿಗರು ಎಂದು ಬರೆಸಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕೆಂದು ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರವು 6ನೇ ತಾರೀಖಿನಿಂದ ಜಾತಿ ಗಣತಿ ಪ್ರಾರಂಭಿಸಿ ಮನೆಗಳಿಗೆ ಬಂದಾಗ ನಾವೆಲ್ಲ ಉಪ ಜಾತಿ ಕಲಾಂನಲ್ಲಿ ಮಾದಿಗರು ಎಂದು ಬರೆಸಬೇಕೆಂದು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ