ಕವನ: ತಾರಕ ರಾಮ

Upayuktha
0





ನವಮಿಯ ಶುಭ ದಿನ ಅವತರಿಸಲು ಭಾಗ್ಯ

ಸವಿ ನಿನ್ನ ನಾಮ ಶ್ರೀ ರಾಮ ..


ರಾಮನ ಪುಣ್ಯದ ನಾಮವ ಭಜಿಸುವ

ಕಾಮನೆ ಸಕಲ ನೆರವೇರೆ..


ದಶರಥ ಕುವರನೆ ಯಶಸನು ಕರುಣಿಸು

ದಶಕಂಠ ವೈರಿ ಭಗವಂತ ..


ಭರತನ ಸೋದರ ವರರಾಮ ರಕ್ಷಿಸೆ

ವರಗಳ ನೀಡು ಪರಮಾತ್ಮ..


ಸಲಿಸುವೆ ಪಾಯಸದೊಲುಮೆಯ ನೈವೇದ್ಯ

ಕಲಿಯುಗದಲ್ಲಿ ತಾರಕ..


ಸೀತೆಯ ಪತಿ ನೀನು ನೀತಿಯ ಪಾಲಕ

ಖ್ಯಾತನು ರಾಮ ಜಗದಲ್ಲಿ..


ರವಿ ಕುಲ ತಿಲಕನು ಕವಿದಿಹ ಮನದಲಿ

ಕವಿ ವಾಣಿಯಲ್ಲಿ ಹಿರಿಯಣ್ಣ..


ನಿನ್ನದೆ ಬದುಕನು ಹೊನ್ನಿನ ತೆರದಲಿ

ಮನ್ನಿಸಿ ಬರೆದ ವಾಲ್ಮೀಕಿ..


ರಾಮನ ಪಾವನ ನಾಮವ ನೆನೆಯಲು

ಕಾಮವು ತೊಲಗಿ ನಿಷ್ಕಾಮ ..


ನಿನಗಾಗಿ ನಿರ್ಮಿತ ಘನವಾದ ದೇಗುಲ

ಮನಸಲಿ ನಿಂತು ಸಾನಂದ..


ರಾಮನ ನೀತಿಯ ಧಾಮದಿ ಪಾಲಿಸೆ

ಶಾಮಕ ಗುಣವು ಮನದಲ್ಲಿ..


ರಾಮನ ಭರಣವು ಭೂಮಿಗೆ ದೊರಕಲಿ

ರಾಮನೆ ಗತಿಯು ನಮಗೆಲ್ಲ..


- ಗುಣಾಜೆ ರಾಮಚಂದ್ರ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ




Tags

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top