ಅಶೋಕನಗರ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಭಜನೋತ್ಸವ

Upayuktha
0


ಮಂಗಳೂರು: ಅಶೋಕನಗರದ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ಭಾನುವಾರ 54ನೇ ವರ್ಷದ ಭಜನೋತ್ಸವ ನೆರವೇರಿತು.


ಸಂಘದ ಸ್ಥಾಪಕ ಗೌರವಾಧ್ಯಕ್ಷ ಎಂ. ಸುಂದರ ಶೆಟ್ಟಿ ಮಾತನಾಡಿ, "ಶ್ರೀ ರಾಮಾಂಜನೇಯ ಭಜನಾ ಮಂದಿರ ಕಳೆದ ಆರು ದಶಕದಿಂದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಆಸ್ತಿಕ ಬಾಂಧವರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿದೆ" ಎಂದರು.


ಧಾರ್ಮಿಕ ಮುಂದಾಳು ಮಾಧವ ಸುವರ್ಣ, ಸಂಜೀವ ರಾಮ್, ಉದ್ಯಮಿ ಸುಧಾಕರ ಆಳ್ವ, ಇಂಜಿನಿಯರ್ ಬಾಬಾ ಅಲಂಗಾರ್, ಹಿಂದೂ ಧಾರ್ಮಿಕ ಸೇವಾ ಸಂಘದ ಅಧ್ಯಕ್ಷ ಬಿ.ರಾಜ್‌ಗೋಪಾಲ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್, ಆಶಾ ಅಶೋಕನ್ ದೀಪ ಪ್ರಜ್ವಲನೆಗೊಳಿಸಿದರು.


ಅರ್ಚಕ ರವಿಚಂದ್ರ ಶಿಬರೂರಾಯ, ಭಜನಾ ಮಂದಿರದ ಅಧ್ಯಕ್ಷ ಸತೀಶ ಪೂಜಾರಿ ಅಶೋಕ ನಗರ, ಉಪಾಧ್ಯಕ್ಷರಾದ ಸುಧಾಕರ.ಕೆ., ದಿನೇಶ ಸುವರ್ಣ, ಪ್ರಧಾನ ಕಾರ್ಯದರ್ಶಿ ರಿತೇಶ್. ಆರ್.ಕುಕ್ಯಾನ್, ಜತೆ ಕಾರ್ಯದರ್ಶಿಗಳಾದ ಪ್ರಸನ್ನ ಕೊಟ್ಟಾರಿ, ಮನೀಶ್ ಶೆಟ್ಟಿಗಾರ್, ಕೋಶಾಧಿಕಾರಿ ನಾರಾಯಣ ಕೋಡಿಕಲ್, ಸಂಘಟನಾ ಕಾರ್ಯದರ್ಶಿ ವಸಂತ್ ಪೂಜಾರಿ, ಪೂಜಾ ಸಂಯೋಜಕರಾದ ಗಣೇಶ್ ಶೆಣೈ, ಮನಮೋಹನ್ ದೇವಾಡಿಗ, ಭಜನಾ ಮಂದಿರ ಸೇವಾ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ಸತ್ಯರಂಜನ್ ರಾವ್, ಕೋಶಾಧಿಕಾರಿ ಬಿ.ಯಾದವ ಕುಂದರ್ ಮುಂತಾದವರು ಉಪಸ್ಥಿತರಿದ್ದರು.


ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ವಿವಿಧ‌ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಏ.7 ರಂದು ಬೆಳಗ್ಗೆ 10ರಿಂದ ಏಕಾದಶಿ ಪ್ರತಿಷ್ಠಾ ವರ್ಧಂತಿ ಕಲ್ಪೋಕ್ತ ಪೂಜೆ, ಕಲಶ ಶುದ್ದಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top