ವಿವೇಕಾನಂದ ಪದವಿಪೂರ್ವ ಕಾಲೇಜ್; ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ- 2025

Upayuktha
0



ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಎಸ್.ಎಸ್‌.ಎಲ್.ಸಿ ವಿದ್ಯಾರ್ಥಿಗಳಿಗಾಗಿ  ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ- 2025 ಉದ್ಘಾಟನೆಗೊಂಡಿತು. ಪುತ್ತೂರಿನ ಖ್ಯಾತ  ವೈದ್ಯ ಡಾ. ಸುರೇಶ್ ಪುತ್ತೂರಾಯ ಇವರು ಶಿಬಿರವನ್ನು ಉದ್ಘಾಟಿಸಿದರು. 


ಶಿಬಿರದಲ್ಲಿ ರಾಜ್ಯದ ಹಲವೆಡೆಯಿಂದ ಆಗಮಿಸಲಿರುವ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಅವಧಿಗಳನ್ನು ನಡೆಸಿಕೊಡಲಿದ್ದಾರೆ. ಉದ್ಘಾಟನೆಯ ಬಳಿಕ ಪ್ರಥಮ ಅವಧಿಯನ್ನು ಸಿ.ಎಸ್.ಐ.ಆರ್ ನ ನಿವೃತ್ತ ಹಿರಿಯ ವಿಜ್ಞಾನಿ ಹಾಗೂ ಸಲ್ಯೂಟರಿ ನ್ಯೂಟ್ರಿಫುಡ್ಸ್ ,ಮೈಸೂರು ಇದರ ಸಹ ಸಂಸ್ಥಾಪಕರು ಹಾಗೂ ತಾಂತ್ರಿಕ ನಿರ್ದೇಶಕರಾದ ಡಾ. ಅನು ಅಪ್ಪಯ್ಯ ಕೆ.ಎ ನಡೆಸಿಕೊಟ್ಟರು. 


Fuel your body Fuel your life ಎಂಬ ವಿಷಯದ ಬಗ್ಗೆ ಮಾತನಾಡಿದ ಇವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರದ ಗುಣಮಟ್ಟ ಹಾಗೂ ಕಲಬೆರಕೆ ಮತ್ತು  ದೈನಂದಿನ ಆಹಾರ ಬಳಕೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಯ ಕುರಿತು ಮಾಹಿತಿ ನೀಡಿದರು. 


ಅಪರಾಹ್ನದ ಬಳಿಕ ನಡೆದ ದ್ವಿತೀಯ ಅವಧಿಯಲ್ಲಿ ತ್ರಿಶಾ ವಿದ್ಯಾ ಸಂಸ್ಥೆ,  ಕಟಪಾಡಿ ಇದರ ಉಪನ್ಯಾಸಕರಾದ ಧೀರಜ್ ಬೆಳ್ಳಾರೆ ಇವರು Master your future ವಿಷಯದ ಕುರಿತಾಗಿ  ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾದ ನಾಯಕತ್ವದ ಗುಣ, ಪರಸ್ಪರ ಸಹಕಾರ ಮಾನೋಭಾವದ ಅಗತ್ಯತೆ, ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವಲ್ಲಿ ತೋರಬೇಕಾದ ಮನೋಸ್ಥೈರ್ಯ ಇವುಗಳನ್ನು  ಮನೋರಂಜನಾಭರಿತ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top