ದೊಡ್ದ ಕಂದಮ್ಮನಿಂದ
ಸಣ್ಣ ಕಂದಮ್ಮನ ಪೂಜೆ!
ಆಹಾ! ರೋಮಾಂಚನ
ಬೆಲ್ಲ ಜೇನು ಒಂದಾಗಿವೆ!
ಸರ್ವವನೂ ಪ್ರೀತಿಸುವ
ನೀನು ನಿಜದಲಿ ದೇವತೆ!
ಬೇನೆ ತಿನುತಲಿ ನೀ ನಗುವವಳೆ
ಹಿಂದೆಯೆ ಅಮ್ಮ ಏನು ಮುಂದೆ?
ಏನು ಭಯ ಬೇಡ ಪುಟ್ಟಿ
ನೀ ಎಂದಿಗೂ ಬಲು ಗಟ್ಟಿ!
ರೀ ನೀವು ಹೇಳಿ ಮಗಳಿಗೆ ಒಂದ್ಮಾತು
ನೀವಂದರೇ ಅವಳ ಕಂದನಿಗೂ ಇಷ್ಟ!
ಏs ಯಾಕಯ್ಯಾ ಕಾಡ್ತಿ ನನ್ನ ಪ್ರೀತಿಗೆ?
ಬೇಕನವಾ ಏಟು,ನೋಡು ಕೊಡ್ತಿನೀಗ!
ಯಾಕ್ರಿ ಮಾವಾ, ನನ್ನ ಕೂಸಿಗೇಕೆ ಮುನಿಸು?
ಆಗಲಿ ಅದು ಕೂಡ ನಿಮ್ಮಂತೆ ಕಾವ್ಯಕಾರಂಜಿ!
ಓ! ಬೇಡ ಮಾರಾಯ್ರೆ,ಒಬ್ರನ್ನೇ ಸಹಿಸಲಾಗದು
ಇನ್ನೊಂದು ತುಂಡು ಕಾವ್ಯಕಥೆಯು ನನ್ನ ಬಾಳಲಿ!
ಇರಲೇಳು ನಮ್ಮಲಿ ಕಾವ್ಯ ಫಸಲು ಹೆಚ್ಚಲಿ ಅಮ್ಮ
ಇದೇ ನಮ್ಮಯ ಆಸೆ ಎಂದ ಸುತ ಸುಮ ಅರಳಿಸಿ!
ಏನು ಮಾಡುವುದೀಗ ಎಲ್ಲ ಬರ್ರಿಲ್ಲಿ ನಾ ಹೇಳ್ತಿನಿ
ಕುಂಬಿ ಮಾಡಿದ ಆರ್ಡರಗೆ ಗರಂ ಆದ ಗುಂಡಣ್ಣಾ!
ಎಲ್ಲ ಸೇರಿ ಬರ್ರಿ ಸಂಪಿಗೆ ಮರದ ಚಿನ್ನಾರಿ ಮುತ್ತಗೆ
ಆರತಿ ಎತ್ತಿರಿ ಗುಲಾಬಿ ಪಕಳೆ ಸವಿ ಮಕರಂದಕೆ!
-ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ