ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ 2 ರೂ. ಏರಿಸಿದ ಕೇಂದ್ರ

Upayuktha
0


ನವದೆಹಲಿ:  ಏಪ್ರಿಲ್‌ ಆರಂಭದಲ್ಲಿಯೇ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 2 ರೂಪಾಯಿ ಏರಿಕೆ ಮಾಡಿದ್ದು, ಈಗ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ 2 ರೂಪಾಯಿ ದರ ಏರಿಕೆ ಮಾಡಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹2 ಹೆಚ್ಚಳ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದೆ. ಹೀಗಾಗಿ ದೇಶಾದ್ಯಂತ ಇಂಧನ ಬೆಲೆ ಎರಡು ರೂಪಾಯಿ ಏರಿಕೆಯಾಗಲಿದೆ. ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.90 ರೂ. ಮತ್ತು ಡೀಸೆಲ್ ಮೇಲೆ 15.80 ರೂ. ಅಬಕಾರಿ ಸುಂಕವನ್ನು ಸಂಗ್ರಹ ಮಾಡುತ್ತಿತ್ತು. ಈಗ ಪೆಟ್ರೋಲ್ ಮೇಲಿನ ಸುಂಕವು ಲೀಟರ್‌ಗೆ 21.90 ರೂ. ಮತ್ತು ಡೀಸೆಲ್ ಮೇಲೆ 17.80 ರೂಪಾಯಿ ಆಗಲಿದೆ. ಅಬಕಾರಿ ಹೆಚ್ಚಳ ದೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಮತ್ತು ಸೆಸ್ ಕೂಡ ಹೆಚ್ಚಾಗುತ್ತದೆ. ಇದರ ಆಧಾರದ ಮೇಲೆ ಹೊಸ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.


ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜೂನ್ 2010 ರವರೆಗೆ ಸರ್ಕಾರವು ನಿರ್ಧರಿಸುತ್ತಿತ್ತು ಮತ್ತು ಪ್ರತಿ 15 ದಿನ ಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. 2010 ಜೂನ್ 26ರ ನಂತರ ಸರ್ಕಾರವು ಪೆಟ್ರೋಲ್ ಬೆಲೆಗಳ ನಿರ್ಧಾರವನ್ನು ತೈಲ ಕಂಪನಿಗಳಿಗೆ ಬಿಟ್ಟಿತು. ಅಕ್ಟೋಬರ್ 2014 ರವರೆಗೆ ಡೀಸೆಲ್ ಬೆಲೆಯನ್ನು ಸರ್ಕಾರ ನಿರ್ಧರಿಸುತ್ತಿತ್ತು. 2014ರ ಅಕ್ಟೋಬರ್ 19 ರಿಂದ, ಸರ್ಕಾರವು ತೈಲ ಕಂಪನಿಗಳಿಗೆ ಹಸ್ತಾಂತರಿಸಿತು.  


ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿ ಮಯ ದರ, ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ವೆಚ್ಚ ಮತ್ತು ಇತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತೈಲಕಂಪೆನಿ ನಿರ್ಧರಿಸುತ್ತವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top